Asianet Suvarna News Asianet Suvarna News

ಕೋಟಿ ಒಡೆಯನಾದರೂ ಬಿಎಸ್‌ವೈ ಆಪ್ತ ಉಮೇಶ್ ಬಾಡಿಗೆ ಮನೆಯಲ್ಲಿದ್ದಿದ್ಯಾಕೆ.?

- ರಾಜ್ಯದಲ್ಲಿ ಬೃಹತ್‌ ಐಟಿ ಬೇಟೆ! ಬಿಎಸ್‌ವೈ ಪಿಎ, ಗುತ್ತಿಗೆದಾರರು ಸೇರಿ ಅನೇಕರಿಗೆ ಶಾಕ್‌

- ರಾಜ್ಯಾದ್ಯಂತ 50 ಸ್ಥಳಗಳಲ್ಲಿ ಏಕಕಾಲಕ್ಕೆ 200 ತೆರಿಗೆ ಅಧಿಕಾರಿಗಳಿಂದ ದಾಳಿ

- ದಾಳಿ ವೇಳೆ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಆಸ್ತಿ, ದಾಖಲೆ ವಶ

First Published Oct 8, 2021, 10:56 AM IST | Last Updated Oct 8, 2021, 11:10 AM IST

ಬೆಂಗಳೂರು (ಅ. 08): ತೆರಿಗೆ ವಂಚನೆ ಆರೋಪದ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಆಪ್ತ ಸಹಾಯಕ ಸೇರಿದಂತೆ ಪ್ರತಿಷ್ಠಿತ ಗುತ್ತಿಗೆದಾರರು ಹಾಗೂ ಲೆಕ್ಕ ಪರಿಶೋಧಕರ ನಿವಾಸ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೊಡ್ಡ ಮಟ್ಟದ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳ 50ಕ್ಕೂ ಅಧಿಕ ಕಡೆ ದಾಳಿ ನಡೆದಿದ್ದು, ನಗದು ಹಣ, ಚಿನ್ನಾಭರಣ, ಆಸ್ತಿಪಾಸ್ತಿ ಹಾಗೂ ಅಪಾರ ಪ್ರಮಾಣದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಕಂಡಕ್ಟರ್ to ಪವರ್ ಬ್ರೋಕರ್: ಉಮೇಶ ನೂರಾರು ಕೋಟಿಯ ಒಡೆಯನಾದ ರೋಚಕ ಕಥೆ!

ಉಮೇಶ್ ಕೋಟಿ ಕೋಟಿ ಒಡೆಯನಾಗಿದ್ದರೂ, ಲಕ್ಕಿ ಮನೆಯೆಂದು ಬಾಡಿಗೆ ಮನೆಯಲ್ಲಿದ್ದರು. ಹಿಂದೆ ಈ ಮನೆಯಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಇದ್ದರು. ರಾಜಾಜಿನಗರದಲ್ಲಿ ಈ ಮನೆಯನ್ನು ಲಕ್ಕಿ ಮನೆ ಎನ್ನುತ್ತಾರೆ. ಸ್ವಂತ ಮನೆ, ಫ್ಲಾಟ್ ಇದ್ದರೂ ಉಮೇಶ್ ಬಾಡಿಗೆ ಮನೆಯಲ್ಲೇ ಇದ್ದರು.