ಪರಂ ಸಾಮ್ರಾಜ್ಯಕ್ಕೆ IT ದಾಳಿ: ಸಂತೋಷ ಎಂದಿದ್ದ ಮಾಜಿ ಡಿಸಿಎಂಗೆ ಮತ್ತೊಂದು ಶಾಕ್!
ಪರಮೇಶ್ವರ್ ಸಾಮ್ರಾಜ್ಯಕ್ಕೆ ಐಟಿ ಲಗ್ಗೆ| ದಾಳಿ ನಡೆಸಿದ ಅಧಿಕಾರಿಗಳಿಗೆ ಸಿಕ್ತು ಅಕ್ರಮ ಆಸ್ತಿ ವಿವರ| ಅಕ್ರಮ ಆಸ್ತಿ ಮಾಡಿದ್ದ ಪರಮೇಶ್ವರ್‌ಗೆ ಮತ್ತೊಂದು ಶಾಕ್
ಬೆಂಗಳೂರು[ಅ.12]: ಡಾ. ಜಿ. ಪರಮೇಶ್ವರ್ ಅಕ್ರಮ ಆಸ್ತಿ ಸಾಮ್ರಾಜ್ಯಕ್ಕೆ ದಾಳಿ ನಡೆಸಿದ ಐಟಿ ಅಧಿಕಾರಿಗಳಿಗೆ ಬೆಚ್ಚಿ ಬಿಳಿಸುವ ಮಾಹಿತಿ ಲಭ್ಯವಾಗಿದೆ.
ಹೌದು ಪರಂ ಆಸ್ತಿ ಕಂಡ ಅಧಿಕಾರಿಗಳು ಅಕ್ಷರಶಃ ದಂಗಾಗಿದ್ದಾರೆ. ಈ ಅಕ್ರಮ ಆಸ್ತಿ ಪ್ರಕರಣಕ್ಕೆ ED ಎಂಟ್ರಿಯಾಗುವುದು ಬಹುತೇಕ ಖಚಿತವಾಗಿದ್ದು, ಡಿಕೆ ಶಿವಕುಮಾರ್‌ಗೆ ಎದುರಾದ ಪರಿಸ್ಥಿತಿಯೇ ಪರಮೇಶ್ವರ್‌ಗೂ ಎದುರಾಗುವ ಸಾಧ್ಯತೆಗಳಿವೆ.
ಪರಮೇಶ್ವರ್ ಮನೆ ಮೇಲೆ ನಡೆದ ದಾಳಿ ವೇಳೆ ಸಿಕ್ಕಿರುವ ದಾಖಲೆಯಲ್ಲಿ ಹವಾಲಾ ದಂಧೆ ನಡೆಸಿರುವ ಅನುಮಾನ ವ್ಯಕ್ತವಾಗಿದ್ದು, ಐಟಿ ಅಧಿಕಾರಿಗಳು ಈ ಸಂಬಂಧ ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.