ಮಹಿಳೆಯರ ರೀತಿ ಪುರುಷರಿಗೂ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿ: ವಾಟಾಳ್‌ ನಾಗರಾಜ್‌

ಮಹಿಳೆಯರ ರೀತಿ ಪುರುಷರಿಗೂ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಬೇಕು ಎಂದು ವಾಟಾಳ್‌ ನಾಗರಾಜ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ.
 

Share this Video
  • FB
  • Linkdin
  • Whatsapp

ಮಹಿಳೆಯರಿಗೆ ಹೇಗೆ ಗೃಹಲಕ್ಷ್ಮಿ(gruhalakshmi) ಯೋಜನೆಯನ್ನು ಸರ್ಕಾರ ಜಾರಿ ಮಾಡಿದೇಯೋ ಹಾಗೆ ಪುರುಷರಿಗೂ ಜಾರಿ ಮಾಡಬೇಕು ಎಂದು ಸರ್ಕಾರವನ್ನು ವಾಟಾಳ್ ನಾಗರಾಜ್‌(vatal nagaraj) ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿಗಳ(guarantee) ವಿರುದ್ಧ ವಾಟಾಳ್‌ ನಾಗರಾಜ್‌ ವಾಗ್ದಾಳಿ ನಡೆಸಿದರು. ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಸರ್ಕಾರ ಗಂಡ-ಹೆಂಡತಿ ನಡುವೆ ಜಗಳವನ್ನು ತಂದು ಹಾಕುತ್ತಿದೆ. ಯಜಮಾನಿಗೆ ಎರಡು ಸಾವಿರ ಬಂದರೇ, ಯಜಮಾನನ ಕತೆ ಏನು ಎಂದು ವಾಟಾಳ್‌ ಪ್ರಶ್ನಿಸಿದ್ದಾರೆ. ಗೌರವಯುತವಾಗಿ ಕೇಳುತ್ತಿದ್ದೇನೆ ಯಜಮಾನನಿಗೂ ಎರಡು ಸಾವಿರ ರೂಪಾಯಿ ಕೊಡಿ ಎಂದು ಒತ್ತಾಯಿಸಿದರು.ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ್ದಾರೆ. ಇದನ್ನು ನೋಡಿದ್ರೆ ಅವರಿಗೆ ಪುರುಷರ ಮೇಲೆ ಏನೋ ದ್ವೇಷ ಇದ್ದ ಹಾಗೆ ಕಾಣಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ವೀಕ್ಷಿಸಿ: ನಿಶಾ ವಂಚನೆ ಪುರಾಣ ಮತ್ತಷ್ಟು ಬಯಲು: ಹಣ ಕೊಟ್ಟವರಿಗೆ ರಾಜಕಾರಣಿಗಳ ಹೆಸರಲ್ಲಿ ಬೆದರಿಕೆ..?

Related Video