ನಿಶಾ ವಂಚನೆ ಪುರಾಣ ಮತ್ತಷ್ಟು ಬಯಲು: ಹಣ ಕೊಟ್ಟವರಿಗೆ ರಾಜಕಾರಣಿಗಳ ಹೆಸರಲ್ಲಿ ಬೆದರಿಕೆ..?
ನಿಶಾ ನರಸಪ್ಪ ಟೀಮ್ ಈಗ ಪೋಷಕರಿಗೆ ರಾಜಕಾರಣಿಗಳ ಹೆಸರಿನಲ್ಲಿ ಬೆದರಿಕೆ ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ನಿಶಾ ನರಸಪ್ಪ ವಂಚನೆ(Nisha Narasappa) ಜಾಲ ಬಗೆದಷ್ಟು ಬಯಲಾಗ್ತಿದೆ. ಆಕೆ ಕೇವಲ ಸೆಲೆಬ್ರೆಟಿಗಳು ಅಲ್ಲದೇ ದೊಡ್ಡ ದೊಡ್ಡ ರಾಜಕಾರಣಿಗಳ(Politicians) ಹೆಸರು ಸಹ ಬಳಸಿದ್ದಾಳೆ ಎಂದು ತಿಳಿದುಬಂದಿದೆ. ಈಕೆ ರಾಜಕಾರಣಿಗಳ ಹೆಸರಿನಲ್ಲಿ ಪೋಷಕರಿಗೆ ಬೆದರಿಕೆ ಮೆಸೇಜ್(Threat Message) ಹಾಕಿದ್ದಾಳೆ ಎಂಬ ಆರೋಪ ಸಹ ಕೇಳಿಬಂದಿದೆ. ಯಾವ ಪೋಷಕರು ಹಣ ಕೊಟ್ಟಿದ್ದಾರೋ ಅವರಿಗೆ ನಿಶಾ ಟೀಮ್ ರಾಜಕಾರಣಿಗಳ ಹೆಸರು ಹೇಳಿ ಬೆದರಿಕೆ ಹಾಕುತ್ತಿದೆ ಎನ್ನಲಾಗ್ತಿದೆ. ಈಗಾಗಲೇ ಪೊಲೀಸರು(Police) ನಿಶಾ ಅಕೌಂಟ್ ಸೀಜ್ ಮಾಡಲು ಮುಂದಾಗಿದ್ದಾರೆ. ಹಣ ಕಳೆದುಕೊಂಡವರು ದೂರು ನೀಡದಂತೆ ಬೆದರಿಕೆ ಹಾಕಲಾಗುತ್ತಿದೆ. ಹೀಗಾಗಿ ನಿಶಾಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಇದನ್ನೂ ವೀಕ್ಷಿಸಿ: ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಸಿದ್ಧತೆ: ಆ.16 ರಂದು ಹಣ ಹಾಕಲಿರುವ ಸರ್ಕಾರ