ಸಾವರ್ಕರ್ ವಿಚಾರದಲ್ಲಿ ರಾಜ್ಯದೆಲ್ಲೆಡೆ ಗದ್ದಲಕ್ಕೆ ಪ್ಲಾನ್: ರಾಜ್ಯ ಸರ್ಕಾರಕ್ಕೆ ಇಂಟೆಲಿಜೆನ್ಸ್ ರಿಪೋರ್ಟ್

ಸರ್ಕಾರ ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಯತ್ನ, ಎಸ್‌ಡಿಪಿಐ, ಪಿಎಫ್‌ಐ ಸೇರಿ ಹಲವು ಸಂಘಟನೆಗಳಿಂದ ಪಕ್ಕಾ ಪ್ಲಾನ್‌ 

First Published Aug 17, 2022, 11:09 AM IST | Last Updated Aug 17, 2022, 11:09 AM IST

ಬೆಂಗಳೂರು(ಆ.17): ಮುಂದಿನ ಚುನಾವಣೆಯನ್ನ ಟಾರ್ಗೆಟ್‌ ಮಾಡಿ ನಡೆಯುತ್ತಿರುವ ಮಹಾ ಸಂಚು ಬಯಲಾಗಿದೆ. ಹೌದು, ರಾಜ್ಯ ಸರ್ಕಾರಕ್ಕೆ ಇಂಟೆಲಿಜೆನ್ಸ್‌ ವರದಿಯೊಂದು ಬಂದಿದೆ. ರೀಪೋರ್ಟ್‌ ನೋಡಿ ರಾಜ್ಯ ಸರ್ಕಾರವೇ ಬೆಚ್ಚಿ ಬಿದ್ದಿದೆ. ಸಾರ್ವಕರ್‌ ಬ್ಯಾನರ್‌ಗೆ ವಿರೋಧ ವ್ಯವಸ್ಥಿತ ಸಂಚಿನ ಭಾಗ, ಈ ಮೂಲಕ ಸರ್ಕಾರ ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಯತ್ನ ನಡೆಯುತ್ತಿದೆ. ಎಸ್‌ಡಿಪಿಐ, ಪಿಎಫ್‌ಐ ಸೇರಿ ಹಲವು ಸಂಘಟನೆಗಳಿಂದ ಪಕ್ಕಾ ಪ್ಲಾನ್‌ ಮಾಡಲಾಗಿದೆ. ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ಈ ಸಂಘಟನೆಗಳು ಪ್ರೇರೇಪಣೆ ಪಡೆದಿವೆಯಂತೆ. ನಾಯಕರ ವಿರುದ್ಧ ಕಾರ್ಯಕರ್ತರ ಆಕ್ರೋಶ ನೋಡಿ ಈ ಸಂಘಟನೆಗಳು ಪ್ರೇರೇಪಣೆ ಪಡೆದಿವೆ. ಬಿಜೆಪಿ ವಿರುದ್ಧವೇ ಕಾರ್ಯಕರ್ತರನ್ನು ಎತ್ತಿಕಟ್ಟುವ ವ್ಯವಸ್ಥಿತ  ಸಂಚು ರೂಪಿಸುತ್ತಿವೆ. 

ಟಿಪ್ಪು Vs ಸಾವರ್ಕರ್ ಫೋಟೋ ವಾರ್: ಶಿವಮೊಗ್ಗ ಘರ್ಷಣೆ ಹಿಂದಿದೆಯಾ SDPI