ಟಿಪ್ಪು Vs ಸಾವರ್ಕರ್ ಫೋಟೋ ವಾರ್: ಶಿವಮೊಗ್ಗ ಘರ್ಷಣೆ ಹಿಂದಿದೆಯಾ SDPI

ಶಿವಮೊಗ್ಗದಲ್ಲಿ ಇಷ್ಟೆಲ್ಲ ನಡೆಯೋದಕ್ಕೆ ಕಾರಣ ಯಾರು?, ಶಾಂತಿಯುತವಾಗಿ ಮುಗೀಬೇಕಾಗಿದ್ದ ಸ್ವಾತಂತ್ರ್ಯೋತ್ಸವ 144ನ ಸೆಕ್ಷನ್‌ ಹಾಕೋವರೆಗೆ ತಲುಪಿದ್ದು ಯಾಕೆ?

First Published Aug 17, 2022, 9:51 AM IST | Last Updated Aug 17, 2022, 9:51 AM IST

ಶಿವಮೊಗ್ಗ(ಆ.17):  ಟಿಪ್ಪು Vs ಸಾವರ್ಕರ್ ವಾರ್‌ ನಿನ್ನೆ ಮೊನ್ನೆಯದ್ದಲ್ಲ, ಆದರೆ, ಶಿವಮೊಗ್ಗದಲ್ಲಿ ಸಾವರ್ಕರ್ ಒಂದು ಬೂದಿ ಮುಚ್ಚಿದ ಕೆಂಡದಂತಾಗಿದೆ. ಸ್ವಾತಂತ್ರ್ಯೋತ್ಸವ ಸಂಭ್ರಮದ ವೇಳೆ ಶುರುವಾದ ಒಂದು ಚಿಕ್ಕ ಗಲಾಟೆ ಚಾಕು ಇರಿತದವರೆಗೆ ಬಂದು ತಲುಪಿದೆ. ಆದರೆ, ಶಿವಮೊಗ್ಗದಲ್ಲಿ ಇಷ್ಟೆಲ್ಲ ನಡೆಯೋದಕ್ಕೆ ಕಾರಣ ಯಾರು?, ಶಾಂತಿಯುತವಾಗಿ ಮುಗೀಬೇಕಾಗಿದ್ದ ಸ್ವಾತಂತ್ರ್ಯೋತ್ಸವ 144ನ ಸೆಕ್ಷನ್‌ ಹಾಕೋವರೆಗೆ ತಲುಪಿದ್ದು ಯಾಕೆ ಎಂಬ ಪ್ರಶ್ನೆಗೆ ಅದೊಂದು ಸಂಘಟನೆ. ಹೌದು, ಎಸ್‌ಡಿಪಿಐ ಅನ್ನೋ ಸಂಘಟನೆಯೇ ಶಿವಮೊಗ್ಗದಲ್ಲಿ ಇಷ್ಟೆಲ್ಲಾ ಹೈಡ್ರಾಮಾ ಕಾರಣ ಅಂತ ಹೇಳಲಾಗುತ್ತಿದೆ. ಅಷ್ಟಕ್ಕೂ ಶಿವಮೊಗ್ಗ ಘರ್ಷಣೆಯಲ್ಲಿ ಎಸ್‌ಡಿಪಿಐ ಪಾತ್ರ ಏನಿರಬಹುದು?, ಎಲ್ಲಿವರೆಗೆ ಬಂತು ಟಿಪ್ಪು Vs ಸಾವರ್ಕರ್ ಫೋಟೋ ವಾರ್‌. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ಸುವರ್ಣ ಎಫ್‌ಐಆರ್‌ನಲ್ಲಿದೆ. 

Praveen Nettaru Murder: ಎನ್‌ಐಎ ತನಿಖೆಯಿಂದ ಕೊಲೆ ಹಿಂದಿನ ಸೀಕ್ರೆಟ್ ಔಟ್

Video Top Stories