Asianet Suvarna News Asianet Suvarna News

ಕೋರಮಂಗಲ ಆಕ್ಸಿಡೆಂಟ್‌ ಬಗ್ಗೆ ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ!

- ಕೋರಮಂಗಲ ಭೀಕರ ಅಪಘಾತ ಪ್ರಕರಣ: ಇಂದ್ರಜಿತ್ ಲಂಕೇಶ್ ಟ್ವಿಸ್ಟಿಂಗ್ ಹೇಳಿಕೆ

- ಡ್ರಿಂಕ್ಸ್ ಜೊತೆ ಡ್ರಗ್ಸ್ ತೆಗೆದುಕೊಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಇಂದ್ರಜಿತ್

- ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಶಾಸಕರ ಪುತ್ರ ಸೇರಿದಂತೆ 7 ಮಂದಿ ದಾರುಣ ಸಾವು

ಬೆಂಗಳೂರು (ಸೆ. 02): ಕೋರಮಂಗಲ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೇವಲ ಮದ್ಯ ಸೇವಿಸಿದರೆ ಈ ರೀತಿ ಅಪಘಾತವಾಗುತ್ತಿರಲಿಲ್ಲ. ಡ್ರಿಂಕ್ಸ್ ಜೊತೆ ಡ್ರಗ್ಸ್ ತೆಗೆದುಕೊಂಡಿರುವ ಸಾಧ್ಯತೆಯೂ ಇದೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. 

ಐಷಾರಾಮಿ ಆಡಿ ಕಾರಿನಲ್ಲಿ ಜಾಲಿ ರೈಡ್‌ ನಡೆಸುವಾಗ ಅಪಘಾತ ಸಂಭವಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಶಾಸಕರ ಪುತ್ರ ಸೇರಿದಂತೆ 7 ಮಂದಿ ದಾರುಣವಾಗಿ ಸಾವಿಗೀಡಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ. 

ಕೋರಮಂಗಲ ಅಪಘಾತ: ಜಾಲಿರೈಡ್‌ಗೂ ಮುನ್ನ ನಡೆದಿತ್ತು ಭರ್ಜರಿ ಪಾರ್ಟಿ?

ಬೆಂಗಳೂರಿಗೆ ಸಮೀಪದಲ್ಲಿರುವ ಕೃಷ್ಣಗಿರಿ ಜಿಲ್ಲೆಯ ಹೊಸೂರು ಶಾಸಕ ವೈ.ಪ್ರಕಾಶ್‌ ಅವರ ಏಕೈಕ ಪುತ್ರ ಕರುಣಾ ಸಾಗರ್‌ (25), ಕೋರಮಂಗಲದ 5ನೇ ಬ್ಲಾಕ್‌ ನಿವಾಸಿ ಮಹಾರಾಷ್ಟ್ರ ಮೂಲದ ಇಷಿತಾ ಬಿಸ್ವಾಸ್‌ (21), ಕೋರಮಂಗಲದ ನಿವಾಸಿ ಕೇರಳ ಮೂಲದ ದಂತ ವೈದ್ಯೆ ಧನುಷಾ (29), ಮುರುಗೇಶ್‌ ಪಾಳ್ಯದ ಬಿಂದು (28), ಕೋರಮಂಗಲದ ನಿವಾಸಿ ಕೇರಳ ಮೂಲದ ಖಾಸಗಿ ಕಂಪನಿ ಉದ್ಯೋಗಿ ಅಕ್ಷಯ್‌ ಗೋಯಲ್‌ (25), ಹರಿಯಾಣದ ಆಡಿಟರ್‌ ಉತ್ಸವ್‌ (25) ಹಾಗೂ ಹುಬ್ಬಳ್ಳಿಯ ರೋಹಿತ್‌ (23) ಮೃತ ದುರ್ದೈವಿಗಳು.