ಕೋರಮಂಗಲ ಅಪಘಾತ: ಜಾಲಿರೈಡ್‌ಗೂ ಮುನ್ನ ನಡೆದಿತ್ತು ಭರ್ಜರಿ ಪಾರ್ಟಿ?

ಕೋರಮಂಗಲ ಅಪಘಾತ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸದ್ಯ ಈ ಅಪಘಾತದ ತನಿಖೆ ವೇಳೆ ಅನೆಕ ವಿಚಾರಗಳು ಹೊರಬೀಳಲಾರಂಭಿಸಿವೆ. ಹೌದು ಕಾರು ಹತ್ತುವ ಮುನ್ನ ಬಿಂದು ಹಾಗೂ ಇಷಿತಾ ಪಾರ್ಟಿಗೆ ರೆಡಿಯಾಗಿದ್ದರು. ಸೋನಿ ವರ್ಲ್ಡ್‌ ರಸ್ತೆ ಮೂಲಕ ಹೈಫೈ ಮದ್ಯದಂಗಡಿಗೆ ಹೋಗಿದ್ದಾರೆನ್ನಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.01) ಕೋರಮಂಗಲ ಅಪಘಾತ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸದ್ಯ ಈ ಅಪಘಾತದ ತನಿಖೆ ವೇಳೆ ಅನೆಕ ವಿಚಾರಗಳು ಹೊರಬೀಳಲಾರಂಭಿಸಿವೆ. ಹೌದು ಕಾರು ಹತ್ತುವ ಮುನ್ನ ಬಿಂದು ಹಾಗೂ ಇಷಿತಾ ಪಾರ್ಟಿಗೆ ರೆಡಿಯಾಗಿದ್ದರು. ಸೋನಿ ವರ್ಲ್ಡ್‌ ರಸ್ತೆ ಮೂಲಕ ಹೈಫೈ ಮದ್ಯದಂಗಡಿಗೆ ಹೋಗಿದ್ದಾರೆನ್ನಲಾಗಿದೆ.

ಇನ್ನು ಮದ್ಯದಂಗಡಿಗೆ ತೆರಳಿ ಅಲ್ಲಿ ರಾತ್ರಿ 08.40 ರಿಂದ 08.44ರವರೆಗೆ ಮದ್ಯ ಖರೀದಿಸಿ ಬಂದಿದ್ದರು. ಬಳಿಕ ಅಲ್ಲೇ ಪಕ್ಕದಲ್ಲಿದ್ದ ಪಬ್‌ಗೂ ತೆರಳಿದ್ದಾಋಎ. ಆದರೆ ಅಲ್ಲಿ ನವೀಕರಣ ಕೆಲಸ ನಡೆಯುತ್ತಿದ್ದರಿಂದ ಮರಳಿದ್ದರು. ಇದಾದ ಬಳಿಕ ಕರುಣ್ ಬಂದು ಪಿಕ್ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದೆಲ್ಲವನ್ನೂ ಗಮನಿಸಿದರೆ ಜಾಲಿರೈಡ್‌ಗೂ ಮುನ್ನ ಯುವಕರು ಪಾರ್ಟಿ ನಡೆಸಿದ್ದರೆಂಬ ಶಂಕೆ ವ್ಯಕ್ತವಾಗಿದೆ. 

Related Video