ಲಾಕ್‌ಡೌನ್: ಬಡವರು, ನಿರ್ಗತಿಕರ ನೆರವಿಗೆ ಧಾವಿಸಿದ ಕೆಂಪೇಗೌಡ ಏರ್ಪೋಟ್ ಸಿಬ್ಬಂದಿ

  • ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಹಿನ್ನೆಲೆ, ಕೆಂಪೇಗೌಡ ಏರ್ಪೋಟ್ ನಿಂದ ಬಡವರಿಗೆ ಆಹಾರ ವಿತರಣೆ. 
  • ಆಹಾರ ವಿತರಣೆಗೆ ತಮ್ಮ ಸಂಬಳದ ಹಣ ನೀಡಿದ ಕೆಐಎಎಲ್  ಸಿಬ್ಬಂದಿ
  • ಬೆಂಗಳೂರು ನಗರ,  ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ  ವಿತರಣೆ
     
First Published Apr 11, 2020, 4:33 PM IST | Last Updated Apr 11, 2020, 4:33 PM IST

ಬೆಂಗಳೂರು (ಏ.11): ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನ್ನ ನೀರು ಸಿಗದೆ ಪರದಾಡ್ತಿರುವವರ ನೆರವಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಧಾವಿಸಿದ್ದಾರೆ. 

ಏರ್ಪೋಟ್‌ನ ಕ್ಯಾಂಟಿನ್‌ನಲ್ಲಿ ಆಹಾರ ತಯಾರಿಸಿ, 12, 500 ಪ್ಯಾಕೆಟ್ ಊಟ, ನೀರಿನ ಬಾಟಲ್ ಮತ್ತು ಬಾಳೆಹಣ್ಣುಗಳನ್ನು ಏರ್ಪೋಟ್‌ನಿಂದ ಕ್ಯಾಂಟರ್ ಮುಖಾಂತರ ಮೂರು ಜಿಲ್ಲೆಗಳ ಡಿಸಿ ಕಛೇರಿಗಳಿಗೆ ರವಾನೆ ಮಾಡಿದರು.

ಇದನ್ನೂ ನೋಡಿ | ಸಿಎಂ ಪರಿಹಾರ ನಿಧಿಗೆ 5 ಸಾವಿರ ಕಿಟ್‌; ಪೂರ್ವಾಂಕುರ ಸಂಸ್ಥೆಯಿಂದ ಮಾನವೀಯ ಕಾರ್ಯ...

ಈ‌ ಬಗ್ಗೆ ನಮ್ಮ ಪ್ರತಿನಿಧಿ ‌ರವಿಕುಮಾರ್ ಏರ್‌ಪೋರ್ಟ್‌ನಿಂದ ವಾಕ್ ಥ್ರೂ ನಡೆಸಿದ್ದಾರೆ ಬನ್ನಿ ‌ನೋಡೊಣ...

ಸೀಲ್‌ಡೌನ್‌ಗೆ ರಾಜ್ಯ ಸಿದ್ಧ; ಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಪೂರೈಕೆ...
"