20 ಸಾವಿರ ಕೊಟ್ರೆ ದಾಖಲೆಯಿಲ್ಲದೆ ಭಾರತಕ್ಕೆ ಎಂಟ್ರಿ: ಶಂಕಿತನೊಬ್ಬನ ವಿಚಾರಣೆಯಲ್ಲಿ ಎನ್ಐಎಗೆ ಸ್ಪೋಟಕ ಮಾಹಿತಿ !
20 ಸಾವಿರ ಕೊಟ್ಟರೆ ಬಾಂಗ್ಲಾದಿಂದ ಭಾರತಕ್ಕೆ ಬರಬಹುದು
ತಲಾ 20 ಸಾವಿರ ಪಡೆದು ಬಾರ್ಡರ್ ದಾಟಿಸಿದ್ದ ಖಲೀಲ್ ಟೀಂ
ಖಲೀಲ್ ಹಾಗೂ ಅಬ್ದುಲ್ ಖಾದರ್ನಿಂದ ಅಕ್ರಮ ವಲಸೆ ಕೆಲಸ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಂಗ್ಲಾ ನಿವಾಸಿಗಳು(Bangla residents) ಬೀಡು ಬಿಟ್ಟಿದ್ದಾರೆ. ಇವರ ವಿಚಾರಣೆ ವೇಳೆ ಎನ್‌ಐಎಗೆ ಸ್ಪೋಟಕ ಮಾಹಿತಿಯೊಂದು ಲಭಿಸಿದೆ. ವಿಚಾರಣೆ ವೇಳೆ ಶಂಕಿತ ವ್ಯಕ್ತಿ 20 ಸಾವಿರ ಕೊಟ್ರೆ ಸಾಕು ದಾಖಲೆಯಿಲ್ಲದೆ ಭಾರತಕ್ಕೆ ಬರಬಹುದು ಎಂದಿದ್ದಾನೆ. ಲಕ್ನೋದಲ್ಲಿ ಖಲೀಲ್ ಚಪ್ರಾಸಿ ಎಂಬ ಶಂಕಿತನನ್ನು ಎನ್ಐಎ( NIA) ಬಂಧಿಸಿತ್ತು. ಖಲೀಲ್ ವಿಚಾರಣೆಯಲ್ಲಿ ಅಕ್ರಮ ಬಾಂಗ್ಲಾ(Bangla) ನಿವಾಸಿಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ವೇಳೆ ಬೆಂಗಳೂರಿನಲ್ಲೂ(bengaluru) ಅಕ್ರಮ ಬಾಂಗ್ಲಾ ನಿವಾಸಿಗಳು ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ. 2011ರಿಂದ ಹಲವರು ಭಾರತಕ್ಕೆ ಬಂದಿದ್ದಾರೆಂದ ಖಲೀಲ್ ಹೇಳಿದ್ದಾನೆ. ಖಲೀಲ್ ಕೊಟ್ಟ ಹೇಳಿಕೆ ಆಧರಿಸಿ ಬೆಳ್ಳಂದೂರು ಬಳಿ NIA ದಾಳಿ ನಡೆಸಿ, ಅಬ್ದುಲ್ ಖಾದಿರ್ ಸೇರಿ ಮೂವರನ್ನು ವಶಕ್ಕೆ ಪಡೆದಿದೆ. ಬೆಳ್ಳಂದೂರು ಠಾಣೆಯಲ್ಲಿ ಅಬ್ದುಲ್ ಖಾದಿರ್ ವಿಚಾರಣೆ ನಡೆಸಲಾಗುತ್ತಿದ್ದು, 42 ಜನರನ್ನು ಕರೆಸಿರೋದಾಗಿ ಬಾಯಿಬಿಟ್ಟಿದ್ದಾನೆ.
ಇದನ್ನೂ ವೀಕ್ಷಿಸಿ: ಸ್ತ್ರೀಶಕ್ತಿಗೆ ಬಲ ತುಂಬಿದ ಗಾರ್ಮೆಂಟ್ಸ್ ಉದ್ಯಮ: ಮಗಳ ಕನಸಿಗೆ ನೀರೆರೆದು ಪೋಷಿಸಿದ ಕುಟುಂಬ!