Flag Row: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸ್ತೀವಿ ಎಂದಿಲ್ಲ: ಈಶ್ವರಪ್ಪ
ಶಿವಮೊಗ್ಗ ಕಾಲೇಜಿನಲ್ಲಿ ತ್ರಿವರ್ಣ ಧ್ವಜ ತೆಗೆದು ಕೇಸರಿ ಬಾವುಟ ಹಾರಿಸಿಲ್ಲ. ರಾಷ್ಟ್ರ ಧ್ವಜಕ್ಕೆ ಏನು ಗೌರವ ಕೊಡಬೇಕು ಅದನ್ನು ದೇಶದಲ್ಲಿ ಅನ್ನ ತಿನ್ನುವ ಪ್ರತಿಯೊಬ್ಬನು ಕೊಡಬೇಕು: ಈಶ್ವರಪ್ಪ
ಬೆಂಗಳೂರು (ಫೆ. 22): ಶಿವಮೊಗ್ಗ ಕಾಲೇಜಿನಲ್ಲಿ ತ್ರಿವರ್ಣ ಧ್ವಜ ತೆಗೆದು ಕೇಸರಿ ಬಾವುಟ ಹಾರಿಸಿಲ್ಲ. ರಾಷ್ಟ್ರ ಧ್ವಜಕ್ಕೆ ಏನು ಗೌರವ ಕೊಡಬೇಕು ಅದನ್ನು ದೇಶದಲ್ಲಿ ಅನ್ನ ತಿನ್ನುವ ಪ್ರತಿಯೊಬ್ಬನು ಕೊಡಬೇಕು. ಇಂದು ದೇಶದಲ್ಲಿ ಹಿಂದುತ್ವದ ಬಗ್ಗೆ ಚರ್ಚೆಯಾಗುತ್ತಿದೆ. ಒಂದು ಕಾಲದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತೀರಾ ಅಂತ ನಗುತ್ತಿದ್ದರು. ಈಗ ರಾಮ ಮಂದಿರ ಕಟ್ಟಿದ್ದೇವೆ. ಹಾಗೆ ದೇಶದಲ್ಲಿ ಐನೂರು ವರ್ಷಗಳ ನಂತರವಾದರೂ ಭಗವಾ ಧ್ವಜವೇ ರಾಷ್ಟ್ರ ಧ್ವಜವಾಗಬಹುದು. ದೇಶದಲ್ಲಿ ಮೊದಲೇನು ತ್ರಿವರ್ಣ ಧ್ವಜ ಇತ್ತ ಹೇಳಿ? ಹಾಗಾಗಿ ಇವತ್ತಲ್ಲ ನಾಳೆ ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಲಿದೆ. ದೇಶದಲ್ಲಿ ಹಿಂದೂ ಧರ್ಮ ಬರಲಿದೆ’ ಎಂದಿದ್ದರು. ಈಶ್ವರಪ್ಪನವರ ಈ ಹೇಳಿಕೆ ರಾಜಕೀಯ ವಲಯದಲ್ಲಿ, ಸದನದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಇಂದು ಈಶ್ವರಪ್ಪ ಮತ್ತೊಮ್ಮೆ ಸ್ಪಷ್ಟನೆ ನೀಡಿದರು.