ಕಾನೂನು ಕೈಗೆತ್ತಿಕೊಳ್ಳಬೇಡಿ, ಸರ್ಕಾರ ಸಹಿಸಲ್ಲ: ಮುಸ್ಲಿಂ ಸಂಘಟನೆಗಳಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ

ವಿವಾದಿತ ಪೋಸ್ಟ್‌ನಿಂದ ಹುಬ್ಬಳ್ಳಿಯಲ್ಲಿ (Hubballi Riot)ಮುಸ್ಲಿಮರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. 'ಕಾನೂನನ್ನು ಕೈಗೆತ್ತಿಕೊಳ್ಳುವ ಸಾಹಸ ಮಾಡಬೇಡಿ, ಸರ್ಕಾರ ಇದನ್ನು ಸಹಿಸುವುದಿಲ್ಲ' ಎಂದು ಹೊಸಪೇಟೆಯಲ್ಲಿ (Hosapete) ಸಿಎಂ ಬೊಮ್ಮಾಯಿ (CM Bommai) ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಹುಬ್ಬಳ್ಳಿ (E. 17): ವಿವಾದಿತ ಪೋಸ್ಟ್‌ನಿಂದ ಹುಬ್ಬಳ್ಳಿಯಲ್ಲಿ (Hubballi Riot)ಮುಸ್ಲಿಮರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. 'ಕಾನೂನನ್ನು ಕೈಗೆತ್ತಿಕೊಳ್ಳುವ ಸಾಹಸ ಮಾಡಬೇಡಿ, ಸರ್ಕಾರ ಇದನ್ನು ಸಹಿಸುವುದಿಲ್ಲ. ಸರ್ಕಾರ ಈ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಗಲಾಟೆಗೆ ಪ್ರಚೋದನೆ ಕೊಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಹೊಸಪೇಟೆಯಲ್ಲಿ (Hosapete) ಸಿಎಂ ಬೊಮ್ಮಾಯಿ (CM Bommai) ಹೇಳಿದ್ದಾರೆ. 

ಹುಬ್ಬಳ್ಳಿ ಗಲಾಟೆ ಹಿಂದೆ AIMIM ಕಾರ್ಪೋರೇಟ್ ಕೈವಾಡ: ಪ್ರಮೋದ್ ಮುತಾಲಿಕ್ ಆರೋಪ

ವಿವಾದಾತ್ಮಕ ಪೋಸ್ಟ್‌ ಮಾಡಿದ ಯುವಕನನ್ನು ಬಂಧಿಸಿದ್ದೇವೆ. ಎಫ್‌ಐಆರ್‌ (FIR) ಆಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮಾತಿಗೆ ಕಿವಿಗೊಡದೆ ಪ್ರತಿಭಟನಕಾರರು ಪುಂಡಾಟ ಮೆರೆದರು. ರಸ್ತೆ ಮೇಲೆ ಕಲ್ಲುಗಳ ರಾಶಿ ಹರಡಿತ್ತು. ಬಸ್‌, ಬೈಕು, ಪೊಲೀಸ್‌ ಜೀಪುಗಳ ಮೇಲೆ ಕಲ್ಲೆಸೆದರು. ಪುಂಡಾಟ ಮೆರೆದವರ ಮೇಲೆ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ತಕ್ಷಣ ದುಷ್ಕರ್ಮಿಗಳ ಬೈಕು ಸೇರಿ ಇನ್ನಿತರೆ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾದರು. ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆ ಹಿಂಬಾಗಕ್ಕೆ ಜಮಾಯಿಸಿದ ಪ್ರತಿಭಟನಕಾರರು ಆಗಾಗ ಮುಂದುವರಿದು ಬರುವುದು ಘೋಷಣೆ ಕೂಗುವುದು ಮಾಡುತ್ತಲೆ ಇದ್ದರು.

Related Video