Hubli Riots: ಹುಬ್ಬಳ್ಳಿ ಗಲಾಟೆ ಹಿಂದೆ AIMIM ಕಾರ್ಪೋರೇಟರ್‌ ಕೈವಾಡ: ಪ್ರಮೋದ್ ಮುತಾಲಿಕ್ ಆರೋಪ

*ನಿಮ್ಮ ತಾಲಿಬಾನೀಕರಣ ಈ ದೇಶದಲ್ಲಿ ನಡೆಯಲ್ಲ
*ನೀವು ಹದ್ದುಬಸ್ತಿನಲ್ಲಿರಿ, ಇಲ್ಲದಿದ್ರೆ ಹಿಂದೂಗಳು ಕೆರಳುತ್ತಾರೆ
*ಹುಬ್ಬಳ್ಳಿ ಗಲಭೆಗೆ ಪ್ರಮೋದ ಮುತಾಲಿಕ್‌ ಪ್ರತಿಕ್ರಿಯೆ 

First Published Apr 17, 2022, 12:16 PM IST | Last Updated Apr 17, 2022, 12:16 PM IST

ಹುಬ್ಬಳ್ಳಿ (ಏ. 17): ಹುಬ್ಬಳ್ಳಿ ಗಲಾಟೆ (Hubballi Riots) ಹಿಂದೆ ಎಐಎಂಐಎಂ (AIMIM) ಕಾರ್ಪೋರೇಟರ್‌ ಕೈವಾಡವಿದೆ ಎಂದು  ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ (Pramod Muthalik) ಆರೋಪಿಸಿದ್ದಾರೆ. ಎಐಎಂಐಎಂನಿಂದ ಮೂರು ಬಾರ ಗೆದ್ದಿರುವ ಕಾರ್ಪೋರೇಟರನ್ನು ಬಂಧಿಸಿ ಎಂದು ಮುತಾಲಿಕ್‌ ಆಗ್ರಹಿಸಿದ್ದಾರೆ. "ಕಾರ್ಪೋರೆಟರನ್ನು ಒದ್ದು ಒಳಗೆ ಹಾಕಿ, ಮೊಬೈಲ್‌ ಸೀಝ್‌ ಮಾಡಿದ್ರೆ ಸತ್ಯ ಹೊರಗೆ ಬರುತ್ತೆ. ನಿಮ್ಮ ತಾಲಿಬಾನೀಕರಣ ಈ ದೇಶದಲ್ಲಿ ನಡೆಯಲ್ಲ, ನೀವು ಹದ್ದುಬಸ್ತಿನಲ್ಲಿರಿ, ಇಲ್ಲದಿದ್ರೆ ಹಿಂದೂಗಳು ಕೆರಳುತ್ತಾರೆ" ಎಂದು ಮುತಾಲಿಕ್‌ ಹೇಳಿದ್ದಾರೆ. 

ಇದನ್ನೂ ಓದಿ: ಗಲಾಟೆಗೆ ಸಂಬಂಧಿಸಿಲ್ಲದವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ: ಕುಟುಂಬಸ್ಥರ ಅಳಲು

ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿರುವ ವಿಚಾರವಾಗಿ ಹಳೆ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ತೀವ್ರ ಹಿಂಸಾಚಾರ  ಸಂಭವಿಸಿದೆ. ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು, ಬಸ್ಸು ಹಾಗೂ ಮತ್ತಿತರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದೆ. ಈ ಬೆನ್ನಲ್ಲೇ ನಗರದಲ್ಲಿ 144 ಸೆಕ್ಷನ್‌ ಜಾರಿಯಾಗಿದ್ದು ಪೊಲೀಸರು ಹಲವರನ್ನು ಬಂಧಿಸಿದ್ದಾರೆ.