Hubballi Riot: ಲಾರಿ ಚಾಲಕನಾಗಿದ್ದ ವಸೀಮ್ ಪಠಾಣ್‌ ಆಝಾನ್‌ ಉದ್ಘೋಷಕನಾಗಿದ್ಹೇಗೆ.?

: ಆಗ ಲಾರಿ ಚಾಲಕನಾಗಿದ್ದ (Lorry Driver) ವಾಸಿಂ ಪಠಾಣ್ (Wasim Pathan) ಆಜಾನ್ ಉದ್ಘೋಷಕ! ವಸೀಂ ಪಠಾಣ್‌ ಲಾರಿ ಚಾಲಕನಾಗಿದ್ದ.

Share this Video
  • FB
  • Linkdin
  • Whatsapp

ಬೆಂಗಳೂರು (ಏ. 22): ಆಗ ಲಾರಿ ಚಾಲಕನಾಗಿದ್ದ (Lorry Driver) ವಾಸಿಂ ಪಠಾಣ್ (Wasim Pathan) ಆಜಾನ್ ಉದ್ಘೋಷಕ! ವಸೀಂ ಪಠಾಣ್‌ ಲಾರಿ ಚಾಲಕನಾಗಿದ್ದ. ಇತ್ತೀಚೆಗೆ ಆ ಕೆಲಸ ಬಿಟ್ಟಿದ್ದ. ಹುಬ್ಬಳ್ಳಿಯ ಮಿಲ್ಲತ್‌ ನಗರದಲ್ಲಿ ಈತನ ಮನೆಯಿದ್ದು, ಅಲ್ಲೇ ಒಂದು ಕಚೇರಿ ಕೂಡ ಇಟ್ಟು​ಕೊಂಡಿದ್ದ. ವೇಷಭೂಷಣವೆಲ್ಲ ಮೌಲ್ವಿ ರೀತಿಯೇ ಇದ್ದ ಕಾರಣ ಈತನನ್ನು ಬಹು​ತೇ​ಕ​ರು ಮೌಲ್ವಿ ಎಂದೇ ಭಾವಿ​ಸಿ​ದ್ದರು. ಆದರೆ ಈತ ಮಸೀ​ದಿ​ಯಲ್ಲಿ ಆಜಾನ್‌ ಕೂಗುತ್ತಿದ್ದ ಎಂದು ತಿಳಿದು ಬಂದಿ​ದೆ.

Hubballi Riot: ಗಲಭೆ ರೂವಾರಿ ವಸೀಂ ಪಠಾಣ್ ಬಂಧನದ ರೋಚಕ ಕಹಾನಿ

ಮುಸ್ಲಿಂ ಧರ್ಮಕ್ಕೆ ಎಲ್ಲೇ ಅವಮಾನವಾದರೂ ಅದರ ಬಗ್ಗೆ ಪೂರ್ಣ ಮಾಹಿತಿ ಪಡೆಯುತ್ತಿದ್ದ. ಜತೆಗೆ ತನ್ನದೇ ಯುವಕರ ಗುಂಪು ಕಟ್ಟಿಕೊಂಡು ಇದರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಹುರಿದುಂಬಿಸುತ್ತಿದ್ದನಂತೆ. ಬೇರೆ ಬೇರೆ ಸಂಘಟನೆಗಳೊಂದಿಗೆ ಈತ ಸಂಪರ್ಕ ಇಟ್ಟುಕೊಂಡಿದ್ದ ಎಂದು ಹೇಳ​ಲಾ​ಗಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

Related Video