Hubballi Riot: ಗಲಭೆ ರೂವಾರಿ ವಸೀಂ ಪಠಾಣ್ ಬಂಧನದ ರೋಚಕ ಕಹಾನಿ
ಹುಬ್ಬಳ್ಳಿಯಲ್ಲಿ ಕಳೆದ ಶನಿವಾರ ತಡರಾತ್ರಿ ನಡೆದ ಗಲಭೆಯ (Hubballi Riot) ‘ಮಾಸ್ಟರ್ ಮೈಂಡ್’ ಎಂದೇ ಹೇಳಲಾದ, ಮಸೀದಿಯಲ್ಲಿ ಆಜಾನ್ (Ajaan) ಕೂಗುವ ವಸೀಂ ಪಠಾಣ್ (Wasim Pathan ) ಆತನ ಮೂವರು ಸಹಚರರು ಸೇರಿ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು (ಏ. 22): ಹುಬ್ಬಳ್ಳಿಯಲ್ಲಿ ಕಳೆದ ಶನಿವಾರ ತಡರಾತ್ರಿ ನಡೆದ ಗಲಭೆಯ (Hubballi Riot) ‘ಮಾಸ್ಟರ್ ಮೈಂಡ್’ ಎಂದೇ ಹೇಳಲಾದ, ಮಸೀದಿಯಲ್ಲಿ ಆಜಾನ್ (Ajaan) ಕೂಗುವ ವಸೀಂ ಪಠಾಣ್ (Wasim Pathan ) ಆತನ ಮೂವರು ಸಹಚರರು ಸೇರಿ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯಲ್ಲಿ (Belagavi) ತಲೆಮರೆಸಿಕೊಂಡಿದ್ದ ವಸೀಂನನ್ನು ಗಲಭೆ ನಡೆದು 5 ದಿನಗಳ ಬಳಿಕ ಬಂಧಿಸಿದ್ದು, ಈತನ ಮೂವರು ಸಹಚರರನ್ನು ಹುಬ್ಬಳ್ಳಿ (Hubballi) ಬೆಂಗಳೂರಿನಲ್ಲಿ (Bengaluru) ಬಂಧಿಸಲಾಗಿದೆ. ಈ ಮೂಲಕ ಒಟ್ಟಾರೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 134ಕ್ಕೇರಿದಂತಾಗಿದೆ.
ವಸೀಂ ಪಠಾಣ್ ಮಾತ್ರವಲ್ಲದೆ ಹುಬ್ಬಳ್ಳಿಯ ತುಫೈಲ್ ಮುಲ್ಲಾ, ರೌಡಿಶೀಟರ್ ಅಬ್ದುಲ್ ಮಲಿಕ್ ಬೇಪಾರಿ, ಎಐಎಂಐಎಂ ಮುಖಂಡ ಮೊಹಮ್ಮದ್ ಆರೀಫ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರೂ ಗಲಭೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂಬ ಆರೋಪ ಇದೆ. ಈ ಗಲಭೆ ಹಿಂದೆ ರಜಾ ಅಕಾಡೆಮಿ ಸದಸ್ಯರ ಕೈವಾಡವಿದೆ ಎನ್ನಲಾಗಿದೆ. ವಸೀಂ ಬಂಧನಕ್ಕೂ ಮುನ್ನ ನಡೆದ ರೋಚಕ ಕಾರ್ಯಾಚರಣೆ ಹೀಗಿವೆ.