ಹೇಗಿತ್ತು ಲೋಕಾಯುಕ್ತದ 'ಆಪರೇಷನ್‌ ಮಾಡಾಳ್' ಕಾರ್ಯಾಚರಣೆ? ಪಿನ್‌ ಟು ಪಿನ್ ಮಾಹಿತಿ..

80 ಲಕ್ಷ ರೂಪಾಯಿಗೆ ಬಿಜೆಪಿ ಶಾಸಕ ಮಾಡಾಳ್‌ ವಿರೂಪಕ್ಷಪ್ಪ ಅವರ ಪುತ್ರ ಮಾಡಾಳ್‌ ಪ್ರಶಾಂತ್‌ ಬೇಡಿಕೆ ಇಟ್ಟಿದ್ದರು. 80 ಲಕ್ಷ ರೂಪಾಯಿ ಕೊಡುವಂತೆ ಕಂಪನಿ ಎಂಡಿ ಶ್ರೇಯಸ್‌ ಕಶ್ಯಪ್‌ ಬೆನ್ನುಬಿದ್ದಿದ್ದರು.

First Published Mar 3, 2023, 2:29 PM IST | Last Updated Mar 3, 2023, 2:39 PM IST

ಬೆಂಗಳೂರು(ಮಾ.03): ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಖೆಡ್ಡಾಗೆ ಹೇಗೆ ಬಿದ್ದರು?. ಹೇಗೆ ಅವರ ಬಳಿ 40 ಲಕ್ಷ ಇರುತ್ತೆ ನಂತರ ಅದು 7 ಕೋಟಿ 62 ಲಕ್ಷ ಬಟಾಬಯಲಾಗುತ್ತದೆ. ಬಿಜೆಪಿ ಶಾಸಕ ಮಾಡಾಳ್‌ ವಿರೂಪಕ್ಷಪ್ಪ ದಂಧೆಯಲ್ಲಿ ಮಗನೇ ರಾಯಭಾರಿನಾ?, ಅಪ್ಪನ ವ್ಯವಹಾರಕ್ಕೆ ಕೈಹಾಕಿ ಮಗ ತಗ್ಲಾಕೊಂಡಿದ್ದಾನೆ. 80 ಲಕ್ಷ ರೂಪಾಯಿಗೆ ಬಿಜೆಪಿ ಶಾಸಕ ಮಾಡಾಳ್‌ ವಿರೂಪಕ್ಷಪ್ಪ ಅವರ ಪುತ್ರ ಮಾಡಾಳ್‌ ಪ್ರಶಾಂತ್‌ ಬೇಡಿಕೆ ಇಟ್ಟಿದ್ದರು. 80 ಲಕ್ಷ ರೂಪಾಯಿ ಕೊಡುವಂತೆ ಕಂಪನಿ ಎಂಡಿ ಶ್ರೇಯಸ್‌ ಕಶ್ಯಪ್‌ ಬೆನ್ನುಬಿದ್ದಿದ್ದರು. ಇದೆಲ್ಲದರ ಬಗ್ಗೆ ಮಾಹಿತಿಯನ್ನ ಕಲೆಹಾಕಿದ್ದ ಲೋಕಾಯುಕ್ತ ಅಧಿಕಾರಿಗಳು ಸರಿಯಾದ ಸಮಯಕ್ಕೆ ದಾಳಿ ಮಾಡಿ ಲಂಚ ಸಮೇತ ಶಾಸಕ ಮಾಡಾಳ್‌ ವಿರೂಪಕ್ಷಪ್ಪ ಅವರ ಪುತ್ರನ್ನ ಖೆಡ್ಡಾಗೆ ಕೆಡವಿದ್ದಾರೆ. ಲೋಕಾಯುಕ್ತದ 'ಆಪರೇಷನ್‌ ಮಾಡಾಳ್' ಕಾರ್ಯಾಚರಣೆ ಹೇಗೆ ನಡೀತು ಎಂಬುದರ ಬಗ್ಗೆ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ಆಪರೇಷನ್ ಮಾಡಾಳ್‌: ಸಹಾಯ ಮಾಡಿ, ತಿಮಿಂಗಲಗಳನ್ನ ಹಿಡಿದು ಹಾಕ್ತೇವೆ!