ಆಪರೇಷನ್ ಮಾಡಾಳ್: ಸಹಾಯ ಮಾಡಿ, ತಿಮಿಂಗಲಗಳನ್ನ ಹಿಡಿದು ಹಾಕ್ತೇವೆ!
ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಹಾಗೂ ಪುತ್ರ ಹೇಗೆ ಲೋಕಾಯುಕ್ತ ಖೆಡ್ಡಾಕ್ಕೆ ಬಿದ್ದಿದ್ದು ಹೇಗೆ? ಲೋಕಾಯುಕ್ತ ಹೆಣೆದ ಆ ಟ್ರ್ಯಾಪ್ ಹೇಗಿತ್ತು? ಆಪರೇಷನ್ ಮಾಡಾಳ್ ಬಗ್ಗೆ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ವಿವರಣೆ ಇಲ್ಲಿದೆ
ಬೆಂಗಳೂರು (ಮಾ.3): ದಾವಣಗೆರೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಲೋಕಾಯುಕ್ತ ಖೆಡ್ಡಾಕ್ಕೆ ಬಿದಿದ್ದಾರೆ. ಅವರ ಪುತ್ರ ಮಾಡಾಳ್ ಪ್ರಶಾಂತ್ ರೆಡ್‌ಹ್ಯಾಂಡ್‌ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಲ್ಲದೆ, ಸ್ವತಃ ಶಾಸಕನ ಮನೆಯ ಮೇಲೂ ಲೋಕಾಯುಕ್ತ ದಾಳಿಯಾಗಿದೆ.
ಈವರೆಗೂ 8 ಕೋಟಿ ರೂಪಾಯಿ ನಗದು ಹಣ ಸಿಕ್ಕಿದ್ದು, ಎಲ್ಲವನ್ನೂ ಲೋಕಾಯುಕ್ತ ವಶಪಡಿಸಿಕೊಂಡಿದೆ. ಪ್ರಶಾಂತ್ ಮಾಡಾಳು ಮನೆಯಲ್ಲಿ 6.10 ಕೋಟಿ ಹಾಗೂ ಅವರ ಆಫೀಸ್‌ನಲ್ಲಿ 2.22 ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ಈವರೆಗೂ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ.
ಪುತ್ರನ ಲಂಚಾವತಾರ: ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ
ಇದರ ನಡುವೆ ಕೋಲಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಇಡೀ ಕಾರ್ಯಾಚರಣೆಯ ವಿವರಗಳನ್ನು ಎಕ್ಲೂಸಿವ್ ಆಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ವಿರುಪಾಕ್ಷಪ್ಪ ಹಾಗೂ ಅವರ ಪುತ್ರ ಲೋಕಾಯುಕ್ತ ಖೆಡ್ಡಾಕ್ಕೆ ಬಿದ್ದಿದ್ದು ಹೇಗೆ ಎನ್ನುವುದನ್ನು ವಿವರಿಸಿದ್ದಾರೆ.