ಹಿಜಾಬ್ ಬೆಂಬಲಿಸಿ ಬಂದ್‌ಗೆ ಕರೆ, ಸದನದಲ್ಲಿ ಮಾಜಿ ಸಿಎಂ ಆಕ್ರೋಶ

ಹಿಜಾಬ್ ತೀರ್ಪು ಬಗ್ಗೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಅಲ್ಲದೇ ಹಿಜಾಬ್ ಬೆಂಬಲಿಸಿ ಮುಸ್ಲಿಂ ಸಂಘಟನೆಗಳು ಬಂದ್‌ಗೆ ಕೊಟ್ಟಿವೆ. ಇದರಿಂದ ಆಕ್ರೋಶಗೊಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಆಕ್ರೊಶ ಹೊರಹಾಕಿದರು.

Share this Video
  • FB
  • Linkdin
  • Whatsapp

ಬೆಂಗಳೂರು, (ಮಾ.17): ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲಎಂದು ಹೈಕೋರ್ಟ್ ಪೂರ್ಣ ಪೀಠದಿಂದ ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಮಹಿಳೆಯರು ಹಿಜಾಬ್ (Hijab Row) ಧರಿಸುವುದು ಕಡ್ಡಾಯವಲ್ಲ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್​, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್​ರವನ್ನು ಒಳಗೊಂಡ ಪೂರ್ಣ ಪೀಠ. ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಾಲೆಗಳಿಗಿದೆ. ರಾಜ್ಯ ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ. ಸಮವಸ್ತ್ರದ ಜತೆ ಹಿಜಾಬ್​ಗೆ ಅನುಮತಿ ಕೋರಿ ಸಲ್ಲಿಸಿದ್ದ, ರಿಟ್ ಅರ್ಜಿಗಳನ್ನು ಹೈಕೋರ್ಟ್ ಪೂರ್ಣ ಪೀಠ ವಜಾಗೊಳಿಸಿದೆ. 

ಉಡುಪಿಯಲ್ಲಿ ಮತ್ತೆ ಹಿಜಾಬ್ ಕಿರಿಕ್, ಪ್ರಚೋದನಕಾರಿ ಗೋಡೆ ಬರಹ ಪತ್ತೆ

ಇದೀಗ ಹಿಜಾಬ್ ತೀರ್ಪು ಬಗ್ಗೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಅಲ್ಲದೇ ಹಿಜಾಬ್ ಬೆಂಬಲಿಸಿ ಮುಸ್ಲಿಂ ಸಂಘಟನೆಗಳು ಬಂದ್‌ಗೆ ಕೊಟ್ಟಿವೆ. ಇದರಿಂದ ಆಕ್ರೋಶಗೊಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಆಕ್ರೊಶ ಹೊರಹಾಕಿದರು.

Related Video