Hijab Row: ಉಡುಪಿಯ 6 ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ಕೊಟ್ಟಿದ್ಯಾರು.?

ಹಿಜಾಬ್ ಗಲಾಟೆಯಲ್ಲಿ ರಾಜಕೀಯ ಪಕ್ಷಗಳು, ನಾಯಕರ ಜೊತೆಗೆ ಧಾರ್ಮಿಕ ಸಂಘಟನೆಗಳು ಕೂಡ ಮಧ್ಯಪ್ರವೇಶಿಸುತ್ತಿರುವ ಕಾರಣ ವಿವಾದಕ್ಕೆ ರಾಜಕೀಯ, ಕೋಮು ಬಣ್ಣವೂ ಮೆತ್ತಿಕೊಂಡಿದೆ.

Share this Video
  • FB
  • Linkdin
  • Whatsapp

ಉಡುಪಿ (ಫೆ. 11): ಕರ್ನಾಟಕದ ಉಡುಪಿಯಲ್ಲಿ (Udupi) ಮೊದಲಿಗೆ ಆರಂಭವಾದ ಹಿಜಾಬ್‌ ವಿವಾದ (Hijab Row) ದಿನೇ ದಿನೇ ಇತರೆ ರಾಜ್ಯಗಳಿಗೂ ಹಬ್ಬುತ್ತಿದ್ದು, ದೇಶವ್ಯಾಪಿಯಾಗುವ ಆತಂಕ ಕಾಡಿದೆ. ಹಿಜಾಬ್‌ ಬೆಂಬಲಿಸಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಪುದುಚೇರಿ, ದೆಹಲಿಯಲ್ಲಿ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಪ್ರಕರಣದಲ್ಲಿ ರಾಜಕೀಯ ಪಕ್ಷಗಳು, ನಾಯಕರ ಜೊತೆಗೆ ಧಾರ್ಮಿಕ ಸಂಘಟನೆಗಳು ಕೂಡ ಮಧ್ಯಪ್ರವೇಶಿಸುತ್ತಿರುವ ಕಾರಣ ವಿವಾದಕ್ಕೆ ರಾಜಕೀಯ, ಕೋಮು ಬಣ್ಣವೂ ಮೆತ್ತಿಕೊಂಡಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ. ಉಡುಪಿಯಲ್ಲಿ ಹಿಜಾಬ್ ವಿವಾದ ಶುರುವಾಗಿದ್ಹೇಗೆ..? 6 ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ಕೊಟ್ಟಿದ್ಯಾರು..? ಇಲ್ಲಿದೆ ಇನ್‌ಸೈಡ್ ಡಿಟೇಲ್ಸ್

Hijab Row: ರಾಜಕೀಯ ನಾಯಕರ ಅರೋಪ-ಪ್ರತ್ಯಾರೋಪ

Related Video