hijab Row: ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪ

ಹಿಜಾಬ್ ಗಲಾಟೆಗೆ (Hijab Row) ರಾಜಕೀಯ ಪಕ್ಷಗಳು, ನಾಯಕರ ಜೊತೆಗೆ ಧಾರ್ಮಿಕ ಸಂಘಟನೆಗಳು ಕೂಡ ಮಧ್ಯಪ್ರವೇಶಿಸುತ್ತಿರುವ ಕಾರಣ ವಿವಾದಕ್ಕೆ ರಾಜಕೀಯ, ಕೋಮು ಬಣ್ಣವೂ ಮೆತ್ತಿಕೊಂಡಿದೆ. 
 

First Published Feb 11, 2022, 5:13 PM IST | Last Updated Feb 11, 2022, 5:13 PM IST

ಕರ್ನಾಟಕದ ಉಡುಪಿಯಲ್ಲಿ (Udupi) ಮೊದಲಿಗೆ ಆರಂಭವಾದ ಹಿಜಾಬ್‌ ವಿವಾದ (Hijab Row) ದಿನೇ ದಿನೇ ಇತರೆ ರಾಜ್ಯಗಳಿಗೂ ಹಬ್ಬುತ್ತಿದ್ದು, ಜೊತೆಗೆ ಪ್ರಕರಣದಲ್ಲಿ ರಾಜಕೀಯ ಪಕ್ಷಗಳು, ನಾಯಕರ ಜೊತೆಗೆ ಧಾರ್ಮಿಕ ಸಂಘಟನೆಗಳು ಕೂಡ ಮಧ್ಯಪ್ರವೇಶಿಸುತ್ತಿರುವ ಕಾರಣ ವಿವಾದಕ್ಕೆ ರಾಜಕೀಯ, ಕೋಮು ಬಣ್ಣವೂ ಮೆತ್ತಿಕೊಂಡಿದೆ. 

ಶಿವಮೊಗ್ಗದಲ್ಲಿ ಮಂತ್ರಿಯ ಮಗ ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ಹಂಚಿದ್ದಾರೆ. ಸೂರತ್‌ನಿಂದ 50 ಲಕ್ಷ ಕೇಸರಿ ಶಾಲು ಆರ್ಡರ್‌ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ. ಬಿಜೆಪಿ ಕಾರ್ಯಕರ್ತರು ಈ ಕೆಲಸ ಮಾಡುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ. 

Hijab Row: ಉಡುಪಿಯ 6 ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ಕೊಟ್ಟಿದ್ಯಾರು.?

ಸೂರತ್‌ನಿಂದ ಕೇಸರಿ ಶಾಲು ಬಂದಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಸಚಿವ ಕೆ.ಎಸ್‌.ಈಶ್ವರಪ್ಪ ತಿರುಗೇಟು ನೀಡಿದ್ದು, ಅಯೋಧ್ಯೆಯ ಶ್ರೀರಾಮ ಫ್ಯಾಕ್ಟರಿಯಿಂದಲೇ ಕೇಸರಿ ಶಾಲು ತರಿಸಿ ರಾಜ್ಯದ ವಿದ್ಯಾರ್ಥಿಗಳಿಗೆ ಹಂಚಿದ್ದೇವೆ. ಶಾಲು ಎಲ್ಲಿಂದ ಬಂದಿವೆ ಎಂಬ ಸಂಗತಿ ಶಿವಕುಮಾರ್‌ಗೆ ಗೊತ್ತಿಲ್ಲ. ಸೂರತ್‌ನಿಂದ ತರಿಸಲಾಗಿದೆ ಎಂದು ಹೇಳುತ್ತಿದ್ದಾರೆ. ರಾಜ್ಯದ ವಿದ್ಯಾರ್ಥಿಗಳ ಕೊರಳಲ್ಲಿ ಇರುವುದು ನಾವು ತರಿಸಿದ ಶಾಲು ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಹಿಜಾಬ್ ವಿಚಾರದಲ್ಲಿ ರಾಜಕೀಯ ನಾಯಕರ ವರ್ತನೆ ಹೇಗಿದೆ ನೋಡಿ