ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ ಗ್ರೀನ್ ಸಿಗ್ನಲ್: ವೃಕ್ಷ ಫೌಂಡೇಶನ್ ಅರ್ಜಿ ರದ್ದುಗೊಳಿಸಿದ ಹೈಕೋರ್ಟ್

ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ ಎದುರಾಗಿದ್ದ ಎಲ್ಲ ಅಡಚಣೆಗಳು ನಿವಾರಣೆಯಾಗಿವೆ. ಉತ್ತರ ಕನ್ನಡ ಜನರ ದಶಕಗಳ ಕನಸು ನನಸಾಗುವ ಕ್ಷಣ ಸನ್ನಿಹಿತವಾಗಿದೆ. 
 

First Published Sep 4, 2023, 9:58 AM IST | Last Updated Sep 4, 2023, 9:58 AM IST

ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ.. ಉತ್ತರ ಕನ್ನಡ ಜಿಲ್ಲೆ ಜನರ ದಶಕಗಳ ಕನಸು. ರೈಲ್ವೆ ಯೋಜನೆ ಇಂದು ಮುಗಿಯುತ್ತೆ. ನಾಳೆ ಮುಗಿಯುತ್ತೇ ಅಂತಾ ಜನರು ಕಾದಿದ್ದೇ ಬಂತು. ಆದ್ರೆ ಯೋಜನೆಗೆ ಒಂದಿಲ್ಲೊಂದು ಅಡ್ಡಿಗಳು ಎದುರಾಗಿ ಕುಂಟುತ್ತಾ ಸಾಗಿತ್ತು. ಸದ್ಯ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ(Ankola-Hubli railway project) ಹೈಕೋರ್ಟ್(High court) ಗ್ರೀನ್ ಸಿಗ್ನಲ್ ನೀಡಿದ್ದು, ಯೋಜನೆಗೆ ಹಿಡಿದಿದ್ದ ಗ್ರಹಣ ದೂರವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಈ ಯೋಜನೆಯಡಿ ಹುಬ್ಬಳ್ಳಿಯ (Hubli) ಕಲಘಟಕಿವರೆಗೂ ಹಳಿ ನಿರ್ಮಿಸಲಾಗಿದೆಯಾದ್ರೂ ಪರಿಸರವಾದಿಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ರು. 2001ರಲ್ಲಿ ಪಾಂಡುರಂಗ ಹೆಗಡೆ ಎಂಬುವವರು ಪಿಐಎಲ್ ಸಲ್ಲಿಸಿದ್ದ ಕಾರಣ 19 ವರ್ಷಗಳ ಕಾಲ ಯೋಜನೆ ನೆನೆಗುದಿಗೆ ಬಿದ್ದಿತ್ತು. 2020ರಲ್ಲಿ ಬಿ.ಎಸ್. ಯಡಿಯೂರಪ್ಪ(B.S. Yediyurappa) ಸಿಎಂ ಆಗಿದ್ದ ಸಂದರ್ಭದಲ್ಲಿ ವನ್ಯಜೀವಿ ಮಂಡಳಿಯಿಂದ ಕ್ಲಿಯರೆನ್ಸ್ ಸಿಕ್ಕಿತು. ಆದ್ರೆ ರೈಲ್ವೆ ಯೋಜನೆ ವಿರುದ್ಧ ವೃಕ್ಷ ಫೌಂಡೇಶನ್ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿತ್ತು. ಯೋಜನೆ ವಿಳಂಬವಾಗ್ತಿರೋದಕ್ಕೆ ವೃಕ್ಷ ಫೌಂಡೇಶನ್ (Vriksha Foundation) ವಿರುದ್ಧ ಉತ್ತರಕನ್ನಡ ರೈಲ್ವೆ ಸೇವಾ ಸಮಿತಿ ಕಾನೂನು ಹೋರಾಟ ಆರಂಭಿಸಿತ್ತು. ಸದ್ಯ ರೈಲ್ವೆ ಸೇವಾ ಸಮಿತಿ ಹೋರಾಟಕ್ಕೆ ಯಶಸ್ಸು ದೊರೆತ್ತಿದ್ದು, ಯೋಜನೆ ಜಾರಿಗೆ ಹೈಕೋರ್ಟ್ ಹಸಿರು ನಿಶಾನೆ ದೊರೆತಿದೆ. 

ಇದನ್ನೂ ವೀಕ್ಷಿಸಿ:  ಹೋಟೆಲ್ ಉದ್ಯಮಿಯ 8 ಬ್ಯಾಂಕ್ ಅಕೌಂಟ್‌ಗಳ ಹಣಕ್ಕೆ ಕನ್ನ !

Video Top Stories