ಹೋಟೆಲ್ ಉದ್ಯಮಿಯ 8 ಬ್ಯಾಂಕ್ ಅಕೌಂಟ್‌ಗಳ ಹಣಕ್ಕೆ ಕನ್ನ !

ಟೆಕ್ನಾಲಜಿ ಬೆಳೆದಂತೆಲ್ಲ ಆನ್‌ ಲೈನ್‌ ವಂಚನೆಗಳು ಜಾಸ್ತಿಯಾಗ್ತಿವೆ. ದಿನಕ್ಕೊಂದು ವೇಶದಲ್ಲಿ ಆನ್‌ ಲೈನ್‌ ವಂಚಕರು ಜನರಿಗೆ ಮಕ್ಮಲ್‌ ಟೋಪಿ ಹಾಕ್ತಿದ್ದಾರೆ. ವಿಜಯಪುರ ಜಿಲ್ಲೆಯ ಹೊಟೇಲ್‌ ಉದ್ಯಮಿಗೆ ಅಕೌಂಟ್‌ ಬ್ಲಾಕ್‌ ಆಗಿದೆ ಸರಿಮಾಡಿ ಕೊಡ್ತೀವಿ ಎಂದು ನಂಬಿಸಿ ಬರೊಬ್ಬರಿ 8 ಅಕೌಂಟಗಳಿಂದ ಹಣ ಲಪಟಾಯಿಸಿದ್ದಾರೆ. 
 

First Published Sep 4, 2023, 9:40 AM IST | Last Updated Sep 4, 2023, 9:40 AM IST

ವಿಜಯಪುರ ನಗರದ ಹೊಟೇಲ್‌ ಉದ್ಯಮಿ ಬಸಯ್ಯ ವಿಭೂತಿ ಮಠ ಸೈಬರ್ ವಂಚಕರ ಜಾಲಕ್ಕೆ ಬಿದ್ದ ಇವರು ಈಗ ಹಣ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸೈಬರ್‌ ವಂಚಕರು ಬಸಯ್ಯಗೆ ಖತರ್ನಾಕ್ ಕತೆ ಕಟ್ಟಿ ಮಕ್ಮಲ್ ಟೋಪಿ ಹಾಕಿದ್ದಾರೆ. ಕೆನರಾ ಬ್ಯಾಂಕ್‌ ಅಕೌಂಟ್‌(Account) ಬ್ಲಾಕ್‌ ಆಗಿದೆ ಕೆವೈಸಿ ಮಾಡಿಸಿ ಎಂದು ವಂಚಕರಿಂದ ಕರೆ ಬಂದಿದೆ. ಇದನ್ನ ನಂಬಿದ ಬಸಯ್ಯ ಬ್ಯಾಂಕ್‌ ಅಕೌಂಟ್‌ ನಂಬರ್‌, ಓಟಿಪಿ ಹಾಗೂ ಎಟಿಎಂ ನಂಬರ್‌ ಶೇರ್‌ ಮಾಡಿದ್ದಾರೆ. ಬಳಿಕ ವಂಚಕರು(Fraud) ಅಕೌಂಟ್‌ನಲ್ಲಿದ್ದ ಹಣವನ್ನೆಲ್ಲ ದೋಚಿದ್ದಾರೆ. ಕೆವೈಸಿ ಮಾಡಿಸದಿದ್ದರೆ ನಿಮ್ಮ ಎಲ್ಲ ಬ್ಯಾಂಕ್‌ ಅಕೌಂಟ್‌ ಗಳು ಬಂದ್‌ ಆಗುತ್ತೆ ಎಂದು ಭಯಬೀಳಿಸಿದ್ದಾರೆ. ಮೊದಲೇ ಹೊಟೇಲ್‌ ಉದ್ಯಮಿಯಾಗಿರೋ(Hotel Businessman) ಬಸಯ್ಯ ಅಕೌಂಟ್‌ಗಳೇ ಬಂದಾದ್ರೆ ಮುಂದೇನು ಅಂತಾ ವಂಚಕರು ಹೇಳಿದಂತೆ ಕೇಳಿದ್ದಾರೆ. ಅಲ್ಲದೆ ತಮ್ಮ ಬಳಿಯಿದ್ದ ಎಲ್ಲ ಬ್ಯಾಂಕ್‌ ಅಕೌಂಟ್‌ ನಂಬರ್‌, ಒಟಿಪಿ ಸಹಿತ ವಂಚಕರೊಂದಿಗೆ ಹಂಚಿಕೊಂಡಿದ್ದಾರೆ. ಒಟ್ಟು 8 ಅಕೌಂಟ್‌ಗಳಿಂದ ಬರೋಬ್ಬರಿ 90 ಸಾವಿರ ಹಣ ಲಪಟಾಯಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಟಾಲಿವುಡ್ 'ಡಾರ್ಲಿಂಗ್' ಫ್ಯಾನ್ಸ್‌ಗೆ ಬಿಗ್ ಶಾಕ್: ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗ್ತಿಲ್ಲ ಸಲಾರ್..!

Video Top Stories