ಕೆ.ಸಿ ಜನರಲ್ ಆಸ್ಪತ್ರೆಗೆ ಹೈ-ಟೆಕ್ ಟಚ್: ಹಳೆಯ ಆಸ್ಪತ್ರೆಗೆ ಹೊಸ ರೂಪ ನೀಡಲು ಸಿದ್ಧತೆ
ಆ ಆಸ್ಪತ್ರೆ ಪ್ರಸಿದ್ಧ ಹಾಗೂ ಹಳೆಯ ಆಸ್ಪತ್ರೆ. ದಿನ ಬೆಳಗಾದ್ರೆ ಸಾವಿರಾರು ಮಂದಿ ಚಿಕಿತ್ಸೆಗೆಂದು ಬಂದು ಹೋಗ್ತಾರೆ. ಆದ್ರೆ ಆಸ್ಪತ್ರೆ ಹಳೆಯದ್ದಾಗಿದ್ದರಿಂದ ಕೆಲ ಕಟ್ಟಡಗಳು ಶಿಥಿಗೊಂಡಿದ್ದವು. ಈ ಬಗ್ಗೆ ಸಾರ್ವಜನಿರಿಂದ ಸಾಲು, ಸಾಲು ದೂರು ಬಂದಿದ್ದವು. ಈ ಬೆನಲ್ಲೇ ಇದೀಗ ಆಸ್ಪತ್ರೆಯ ರಿನೋವೇಷನ್ ಕಾರ್ಯ ಆರಂಭವಾಗಿದೆ.
ಇತ್ತೀಚೆಗೆ ರಾಜ್ಯದ ಬಹುತೇಕ ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯರ ಕೊರತೆ, ಉಪಕರಣಗಳ ಕೊರತೆಯೇ ಹೆಚ್ಚು. ಕೆಲ ಆಸ್ಪತ್ರೆಗಳಲ್ಲಿ ಕಟ್ಟಡಗಳು ಬೀಳೋ ಹಂತ ತಲುಪಿವೆ. ಇದರಿಂದ ನಿತ್ಯ ಸರ್ಕಾರಕ್ಕೆ ಹಾಗೂ ಆರೋಗ್ಯ ಇಲಾಖೆಗೆ(Health Department) ಸಾಲು, ಸಾಲು ದೂರುಗಳು ಬರ್ತಿವೆ. ಹೀಗಾಗಿ ಎಚ್ಚೆತ್ತ ಆರೋಗ್ಯ ಇಲಾಖೆ ರಾಜ್ಯದ ಕೆಲ ಆಸ್ಪತ್ರೆಗಳಿಗೆ ಹೈ-ಟೆಕ್ ಟಚ್ ನೀಡಲು ಮುಂದಾಗಿದೆ. ಹಳೆ ಹಾಗೂ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾದ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಗೆ(K.C.General Hospital) ಹೊಸ ರೂಪ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿ ಆಸ್ಪತ್ರೆಗಳು ಕಮ್ಮಿ ಇಲ್ಲ ಎಂಬಂತೆ ಕೆ.ಸಿ. ಜನರಲ್ ಆಸ್ಪತ್ರೆಗೆ ಹೈಟೆಕ್ ರೂಪ ನೀಡಲು ಸಿದ್ದತೆ ನಡೆದಿದ್ದು ಕೆಲಸಗಳು ಬರದಿಂದ ಸಾಗುತ್ತಿದೆ. ಇದಕ್ಕೂ ಮೊದಲು ನಗರದ ಅನೇಕ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao ) ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಂದೇ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಪಣ ತೊಟ್ಟಿದ್ದರು ಇದೀಗ ಕೆ.ಸಿ ಜನರಲ್ ಆಸ್ಪತ್ರೆಗೆ ಹೊಸ ರೂಪ ನೀಡಲು ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. ಈ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಆಸ್ಪತ್ರೆಯ ಸ್ಟ್ರಕ್ಚರ್ ಹಾಗೂ ಹೊಸ ಬಿಲ್ಡಿಂಗ್ ನಿರ್ಮಾಣಕ್ಕಾಗಿ ಇಂಜಿನಿಯರ್ಗಳೂ ಸ್ಥಳ ವೀಕ್ಷಣೆ ನಡೆಸಿದ್ದಾರೆ.
ಇದನ್ನೂ ವೀಕ್ಷಿಸಿ: 2018ರಲ್ಲಿ ಯಾವ ಅನ್ನ ಹಳಸಿತ್ತು, ಯಾವ ನಾಯಿ ಹಸಿದು ಬಾಗಿಲ ಬಳಿ ಬಂದಿತ್ತು?