2018ರಲ್ಲಿ ಯಾವ ಅನ್ನ ಹಳಸಿತ್ತು, ಯಾವ ನಾಯಿ ಹಸಿದು ಬಾಗಿಲ ಬಳಿ ಬಂದಿತ್ತು?

ಲೋಕಸಭೆ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ, ಘೋಷಣೆ ಮಾತ್ರ ಬಾಕಿ,  ಬಿಜೆಪಿ ಜೆಡಿಎಸ್ ಮೈತ್ರಿ ವ್ಯಂಗ್ಯವಾಡಿದ ಸಿಎಂ ಸಿದ್ದರಾಮಯ್ಯ, ಅರಮನೆ ಮೈದಾನದಲ್ಲಿ ಮಹತ್ವದ ಜೆಡಿಎಸ್ ಸಭೆ, ದೆಹಲಿಯಲ್ಲಿ ಜಿ20  ಸಭೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ನ್ಯೂಸ್ ಹವರ್ ವಿಡಿಯೋಇಲ್ಲಿದೆ

Share this Video
  • FB
  • Linkdin
  • Whatsapp

ಬಿಜೆಪಿ -ಜೆಡಿಎಸ್ ಮೈತ್ರಿಯನ್ನು ಕಾಂಗ್ರೆಸ್ ಟೀಕಿಸಿದೆ. ಅನ್ನ ಹಳಸಿತ್ತು, ನಾಯಿ ಹಸದಿತ್ತು ಎಂದು ವ್ಯಂಗ್ಯವಾಡಿದೆ. ಈ ಟೀಕೆಗೆ ಹೆಚ್‌ಡಿ ಕುಮಾರಸ್ವಾಮಿ ಕೆರಳಿದ್ದಾರೆ. 2018ರಲ್ಲಿ ಯಾವ ಅನ್ನ ಹಳಸಿತ್ತು, ಯಾವ ನಾಯಿ ಹಸಿದು ಬಾಗಿಲ ಬಳಿ ಬಂದಿತ್ತು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ 2018ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಘಚನೆಯನ್ನು ನೆನಪಿಸಿದ್ದಾರೆ. ಇಷ್ಟೇ ಅಲ್ಲ ಅಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ದೇವೇಗೌಡರ ಮನೆ ಮುಂದೆ ಕೈಕಟ್ಟಿ ನಿಂತು ಸರ್ಕಾರ ರಚನೆ ಮನವಿ ಮಾಡಿದ ಘಟನೆನ್ನು ನೆನಪಿಸಿ ಹೆಚ್‌ಡಿಕೆ ತಿರುಗೇಟುನೀಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ರಹಸ್ಯ ಮೈತ್ರಿ ಒಪ್ಪಂದ ಆಗಿದೆ. ನಾಳೆ ಜೆಡಿಎಸ್ ಕರೆದಿರುವ ಸಭೆ ಬಳಿಕ ಮೈತ್ರಿ ಘೋಷಣೆಯಾಗುವ ಸಾಧ್ಯತೆಇದೆ.

Related Video