ಹಲೋ ಮಿನಿಸ್ಟರ್‌ನಲ್ಲಿ ಸುನೀಲ್ ಕುಮಾರ್: ಪವರ್ ಸಮಸ್ಯೆಗಳಿಗೆ ಶೀಘ್ರವೇ ಮುಕ್ತಿ ಭರವಸೆ
ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿನೂತನ ಕಾರ್ಯಕ್ರಮ 'ಹಲೋ ಮಿನಿಸ್ಟರ್'ಗೆ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ಆಗಮಿಸಿದ್ದರು. ಇವರ ಶೈಕ್ಷಣಿಕ ಜೀವನ ನೋಡುವುದಾದರೆ ವಿದ್ಯಾರ್ಥಿ ದೆಸೆಯಿಂದ ಆರ್ ಎಸ್‌ಎಸ್ ಗರಡಿಯಲ್ಲಿ ಬೆಳೆದರು.
ಬೆಂಗಳೂರು (ಅ. 02): ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿನೂತನ ಕಾರ್ಯಕ್ರಮ 'ಹಲೋ ಮಿನಿಸ್ಟರ್'ಗೆ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ಆಗಮಿಸಿದ್ದರು. ಇವರ ಶೈಕ್ಷಣಿಕ ಜೀವನ ನೋಡುವುದಾದರೆ ವಿದ್ಯಾರ್ಥಿ ದೆಸೆಯಿಂದ ಆರ್ ಎಸ್‌ಎಸ್ ಗರಡಿಯಲ್ಲಿ ಬೆಳೆದರು.
ಎಲ್ಲಾ ದಾಖಲೆ ಇದ್ರೂ ವಿದ್ಯುತ್ ಕನೆಕ್ಷನ್ ಇಲ್ಲ, ಅಧಿಕಾರಿಗಳಿಗೆ ಇಂಧನ ಸಚಿವರ ವಾರ್ನಿಂಗ್
ಅಲ್ಲಿಂದಲೇ ಸಾರ್ವಜನಿಕ ಜೀವನಕ್ಕೆ ಎಂಟ್ರಿ ಕೊಟ್ಟರು. ದತ್ತಪೀಠ ಹೋರಾಟದಲ್ಲಿ ಗುರುತಿಸಿಕೊಂಡರು. 2004 ರಲ್ಲಿ ಕಾರ್ಕಳದಿಂದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ಅಲ್ಲಿಂದ ರಾಜಕೀಯ ಜೀವನ ಶುರು ಮಾಡಿದರು. ಹಿಂದುತ್ವದ ವಿಚಾರ ಬಂದರೆ ಪ್ರಖರ ವಾಗ್ಮಿ, ಕ್ಷೇತ್ರದ ಕೆಲಸ ಅಂತ ಬಂದರೆ 24 ಗಂಟೆಯೂ ಸಕ್ರಿಯ ಸಚಿವ. ಇದೀಗ ಇಂಧನ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 'ಹಲೋ ಮಿನಿಸ್ಟರ್' ನಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.