ಆಕ್ಸಿಜನ್ ಸಿಕ್ಕಿದ್ರೆ ನನ್ನ ಅಪ್ಪ ಬದುಕ್ತಿದ್ರು; ಮಗಳ ಕಣ್ಣೀರು

ಕೊರೋನಾ ಸೊಂಕಿತರಿಗೆ ಆಕ್ಸಿಜನ್ ಸಮಸ್ಯೆ ಅತೀವವಾಗಿ ಕಾಡುತ್ತಿದೆ. ಚಾಮರಾಜನಗರ ದುರಂತ ಕಣ್ಣೇದುರೇ ಇದೆ. 

First Published Jun 11, 2021, 6:50 PM IST | Last Updated Jun 11, 2021, 7:11 PM IST

ಬೆಂಗಳೂರು (ಜೂ. 11): ಕೊರೋನಾ ಸೊಂಕಿತರಿಗೆ ಆಕ್ಸಿಜನ್ ಸಮಸ್ಯೆ ಅತೀವವಾಗಿ ಕಾಡುತ್ತಿದೆ. ಚಾಮರಾಜನಗರ ದುರಂತ ಕಣ್ಣೇದುರೇ ಇದೆ. 'ಆಕ್ಸಿಜನ್ ಸಿಗದೇ ತಂದೆಯನ್ನು ಕಳೆದುಕೊಂಡ ಮಗಳ ಕರುಣಾಜನಕ ಕಥೆ ಇದು. 'ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಕ್ಕಿದ್ದರೆ ನನ್ನ ತಂದೆ ಬದುಕುತ್ತಿದ್ದರು' ಎಂದು ಮಗಳು ಕಣ್ಣೀರಿಟ್ಟಿದ್ಧಾಳೆ. 

ಕೊರೋನಾ 3 ನೇ ಅಲೆ : ಮಕ್ಕಳಿಗೆ ವಿಶೇಷ ವಾರ್ಡ್‌ನಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಜೈಶಂಕರ್ ಎಂಬುವವರು ಮೃತಪಟ್ಟಿದ್ದಾರೆ. ರಾತ್ರೋರಾತ್ರಿ ಆಸ್ಪತ್ರೆಯಿಂದ ಶವವನ್ನು ಹಸ್ತಾಂತರ ಮಾಡಲಾಗಿದೆ. ಜೊತೆಗೆ ಆಕ್ಸಿಜನ್ ಸಿಗದೇ ಮೃತಪಟ್ಟವರ ಪಟ್ಟಿಯಲ್ಲೂ ಇವರ ಹೆಸರಿಲ್ಲ. ಜಿಲ್ಲಾಸ್ಪತ್ರೆಯಿಂದ ಇದೆಂಥಾ ಯಡವಟ್ಟು..?