Asianet Suvarna News Asianet Suvarna News

ಅಂಬಿ ಕಾಲದಲ್ಲೇ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಅಭಿಷೇಕ್ ಅಂಬರೀಶ್ ಉತ್ತರ!

Jul 9, 2021, 6:02 PM IST

ಬೆಂಗಳೂರು (ಜು. 09): ಸುಮಲತಾ- ಎಚ್‌ಡಿ ಕುಮಾರಸ್ವಾಮಿಗೆ ನಡುವಿನ ವಾಕ್ಸಮರ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕೆಆರ್‌ಎಸ್ ಬಿರುಕು ವಿಚಾರದಿಂದ ಶುರುವಾಗಿ ಮೈಷುಗರ್ ಕಾರ್ಖಾನೆ, ಈಗ ಅಂಬಿ ಸ್ಮಾರಕ ವಿಚಾರದವರೆಗೆ ಬಂದು ನಿಂತಿದೆ. 

'ಅಂಬಿ ಸ್ಮಾರಕ ವಿಚಾರಕ್ಕೆ ಮನವಿ ಪತ್ರ ಕೊಡೋಕೆ ಹೋದ್ರೆ ಮುಖಕ್ಕೆ ಬಿಸಾಡಿದ್ರು ಎಚ್‌ಡಿಕೆ'

' ನಾವೇ ಗಣಿಗಾರಿಕೆ ಮಾಡ್ತಾ ಇದ್ದಿದ್ರೆ , ಬ್ಯುಸಿನೆಸ್ ಇದ್ದಿದ್ರೆ ನಾವ್ಯಾಕೆ ಕ್ಲೋಸ್ ಮಾಡಿಸ್ತಾ ಇದ್ದೀವಾ..? ನಾವ್ಯಾಕೆ ಅಕ್ರಮ ಗಣಿಗಾರಿಕೆ ವಿರುದ್ದ ಧ್ವನಿ ಎತ್ತುತ್ತಿದ್ದೆವು ಹೇಳಿ..?  ಎಂದು ಅಭಿಷೇಕ್ ಅಂಬರೀಶ್ ಪ್ರತಿಕ್ರಿಯಿಸಿದ್ಧಾರೆ. ನಮ್ಮ ಅಮ್ಮನ ಪರವಾಗಿ ಎಂದಿಗೂ ನಿಲ್ಲುತ್ತೇವೆ' ಎಂದಿದ್ದಾರೆ.