Halal Row ಗಂಡಸ್ತನ ಹೇಳಿಕೆಗೆ ಎಚ್‌ಡಿ ಕುಮಾರಸ್ವಾಮಿ ವಿಷಾದ!
ಆವೇಶದಲ್ಲಿ ಗಂಡಸ್ತನ ಎಂದು ಮಾತನಾಡಿದ್ದೇನೆ
ನನ್ನ ಹೇಳಿಕೆಯನ್ನು ಅನ್ಯತಾ ಭಾವಿಸಬೇಡಿ ಎಂದ ಎಚ್ ಡಿಕೆ
ಗಂಡಸ್ತನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಮಾಜಿ ಸಿಎಂ
ಬೆಂಗಳೂರು (ಮಾ. 31): ರಾಜ್ಯದಲ್ಲಿ ತೀವ್ರವಾಗಿರುವ ಹಲಾಲ್ (Halal Row)ಹಾಗೂ ಮುಸ್ಲಿಮರ ಮಳಿಗೆಗಳಿಗೆ ನಿರ್ಬಂಧ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ( HD Kumaraswamy) ಮಾತನಾಡುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ಗಂಡಸ್ತನ ಪ್ರಶ್ನೆ ಮಾಡಿದ್ದರು. ಆದರೆ, ತಮ್ಮ ಹೇಳಿಕೆ ವಿವಾದವಾಗುವ ಸ್ವರೂಪ ಅರಿತ ಕೂಡಲೇ ಮಾಜಿ ಮುಖ್ಯಮಂತ್ರಿ ಎಚ್ ಡಿಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಮಾತನಾಡುವ ಆವೇಶದಲ್ಲಿ ಗಂಡಸ್ತನ ಎಂದು ಪದ ಬಳಸಿದ್ದೇನೆ. ನನ್ನ ಹೇಳಿಕೆಯನ್ನು ಅನ್ಯತಾ ಭಾವಿಸಬೇಡಿ. ಈ ಹೇಳಿಕೆಗೆ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದ್ರೂ ನೋವಾದ್ರೆ ವಿಷಾದಿಸುತ್ತೇನೆ. ಶಿವಮೊಗ್ಗದ ಭೂಮಿಯಲ್ಲಿ ಜನಿಸಿದ ಮಹಾತ್ಮ ಕುವೆಂಪು ಅವರಿಗೆ ಬೆಲೆ ಕೊಟ್ಟಾದರೂ, ಈ ವಿಷಬೀಜ ಬಿತ್ತುವುದನ್ನು ಬಿಡಿ ಎಂದು ಕೇಳಿದ್ದೇನೆ ಎಂದಿದ್ದಾರೆ.
Halal Row ಕುಮಾರಸ್ವಾಮಿ ಮಾತಿಗೆ ಉತ್ತರ ಕೊಡೋಕೆ ನಾನು ಇಲ್ಲಿರೋದಲ್ಲ ಎಂದ ಸಿಎಂ!
ಇನ್ನು ಕುಮಾರಸ್ವಾಮಿ ಹೇಳಿಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಕುಮಾರಸ್ವಾಮಿ ಹೇಳಿಕೆಗೆ ಉತ್ತರ ನೀಡೋದಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನನ್ನ ಕರ್ತವ್ಯ. ಇದರಲ್ಲಿ ಗಂಡಸ್ತನದ ಪ್ರಶ್ನೆಯೇ ಇಲ್ಲ. ಯಾವುದೇ ವಿಚಾರವನ್ನು ದಕ್ಷತೆಯಿಂದ ಎದುರಿಸಿದ್ದೇವೆ ಎಂದು ಹೇಳಿದ್ದಾರೆ.