Halal Row ಕುಮಾರಸ್ವಾಮಿ ಮಾತಿಗೆ ಉತ್ತರ ಕೊಡೋಕೆ ನಾನು ಇಲ್ಲಿರೋದಲ್ಲ ಎಂದ ಸಿಎಂ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಎಚ್ ಡಿಕೆ ವಾಗ್ದಾಳಿ

ಸಿಎಂಗೆ ಗಂಡಸ್ತನ ಇದ್ರೆ ಹಲಾಲ್, ವ್ಯಾಪಾರ ಸಂಘರ್ಷ ತಡೆಯಲಿ

ಎಚ್ ಡಿಕೆ ಮಾತಿಗೆ ಸಿಎಂ ತೀಕ್ಷ್ಣ ಪ್ರತಿಕ್ರಿಯೆ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ 31): ರಾಜ್ಯದಲ್ಲಿ ತೀವ್ರವಾಗಿರುವ ಹಲಾಲ್ (Halal Row)ಹಾಗೂ ಮುಸ್ಲಿಮರ ಮಳಿಗೆಗಳಿಗೆ ನಿರ್ಬಂಧ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ( HD Kumaraswamy) ಕೆಂಡಾಮಂಡಲವಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ ಅವರು, ಸಿಎಂಗೆ ಗಂಡಸ್ತನ ಇದ್ದರೆ ರಾಜ್ಯದಲ್ಲಿ ಈಗ ನಡೆಯುತ್ತಿರುವ ವಿವಾದಗಳನ್ನು ತಡೆಯಲಿ ಎಂದು ಸವಾಲ್ ಹಾಕಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಬಸವರಾಜ ಬೊಮ್ಮಾಯಿ, "ಕುಮಾರಸ್ವಾಮಿ ಮಾತಿಗೆ ಉತ್ತರ ಕೊಡೋಕೆ ನಾನು ಇಲ್ಲಿರೋದಲ್ಲ. ಈ ವಿಚಾರವನ್ನು ದಕ್ಷತೆಯಿಂದ ಎದುರಿಸಲಿದ್ದೇವೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ (BJP) ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸಿ. ಸಿಎಂಗೆ ಗಂಡಸ್ತನ ಇದ್ದರೆ ಇದನ್ನು ತಡೆಯಲಿ. ನಾನು ಈ ಪದವನ್ನು ಬಳಸಬಾರದು. ಆದರೆ, ತಡೆಯಲಾರದೆ ಬಳಸಿದ್ದೇನೆ. ಹಲಾಲ್ ನಿಷೇಧಕ್ಕೆ ಕರಪತ್ರವನ್ನುಹಂಚಲಾಗುತ್ತಿದೆ. ಕೇಸರಿ ಬಟ್ಟೆಯನ್ನು ಧರಿಸಿಕೊಂಡು ಹಳ್ಳಿ ಹಳ್ಳಿಯಲ್ಲಿ ವಿಷಬೀಜ ಬಿತ್ತುತ್ತಿದ್ದೀರಿ. ಯಾವ ಸಂವಿಧಾನವನ್ನುಈ ಮೂಲಕ ಗೌರವಿಸಲಿ ಹೊರಟಿದ್ದೀರಿ ಎಂದು ಎಚ್ ಡಿಕೆ ಪ್ರಶ್ನೆ ಮಾಡಿದ್ದಾರೆ.

Karnataka Politics ಕುಮಾರಸ್ವಾಮಿ ಗಂಡಸ್ತನ ಮಾತಿಗೆ ಸಿಡಿದೆದ್ದ ಬಿಜೆಪಿ ನಾಯಕರು

ಎಚ್ ಡಿಕೆ ಅವರ ಗಂಡಸ್ತನ ಸವಾಲಿಗೆ ಉತ್ತರ ಕೊಡೋದಿಲ್ಲ. ಇದರಲ್ಲಿ ಗಂಡಸ್ತನದ ಪ್ರಶ್ನೆಯೇ ಇಲ್ಲ. ಯಾವುದೇ ವಿಚಾರವನ್ನು ದಕ್ಷತೆಯಿಂದ ಎದುರಿಸಿದ್ದೇವೆ. ಎಚ್ ಡಿಕೆ ಮಾತಿಗೆ ನಾನು ಉತ್ತರ ನೀಡೋದಿಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡೋದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

Related Video