ಆಡಿಯೋ ಇದ್ರೆ ಬಿಡುಗಡೆ ಮಾಡಲಿ ನೋಡೋಣ: ಜಮೀರ್‌ಗೆ ಎಚ್‌ಡಿಕೆ ಸವಾಲ್.!

ಜೆಡಿಎಸ್‌ನಲ್ಲಿದ್ದಾಗ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸಾಕಿದ್ದೇ ನಾನು. ಅವರಿಗಾಗಿ ನಾನು ಡ್ರೈವರ್‌ ಆಗಿದ್ದೆ. ಆದರೂ ಬ್ರದರ್‌ ಬ್ರದರ್‌ ಎನ್ನುತ್ತಲೇ ಕತ್ತು ಕೊಯ್ದರು ಎಂದು ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಟೀಕಾ ಪ್ರಹಾರ ನಡೆಸಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ.26): ಜೆಡಿಎಸ್‌ನಲ್ಲಿದ್ದಾಗ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರನ್ನು ಸಾಕಿದ್ದೇ ನಾನು. ಅವರಿಗಾಗಿ ನಾನು ಡ್ರೈವರ್‌ ಆಗಿದ್ದೆ. ಆದರೂ ಬ್ರದರ್‌ ಬ್ರದರ್‌ ಎನ್ನುತ್ತಲೇ ಕತ್ತು ಕೊಯ್ದರು ಎಂದು ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ (Zameer Ahmad Khan) ಟೀಕಾ ಪ್ರಹಾರ ನಡೆಸಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. 

ಸಿಂದಗಿಯಲ್ಲಿ ಪ್ರಬಲ ಸಮುದಾಯಗಳ ಓಲೈಕೆಗೆ ಬಿಜೆಪಿ-ಕಾಂಗ್ರೆಸ್ ಕಸರತ್ತು..!

'ಜಮೀರ್ ಮಾತ್ರವಲ್ಲ, ಸುಮಾರು ಜನ ನನ್ನನ್ನ ಸಾಕಿದ್ದಾರೆ. ನನ್ನ ಕಾಲು ಹಿಡಿದು ಎಷ್ಟು ಕೋಟಿ ಪಡೆದರು ಗೊತ್ತಿದೆ. ನಾನು ಯಾರಿಗೂ ಟೋಪಿ ಹಾಕುವ ಕೆಲಸ ಮಾಡಿಲ್ಲ. ನಮ್ಮ ಬಗ್ಗೆ ಏನೇ ಅಡಿಯೋ ಇದ್ದರೂ ಬಿಡುಗಡೆ ಮಾಡಲಿ' ಎಂದು ಎಚ್‌ಡಿಕೆ ಹೇಳಿದ್ಧಾರೆ. 

Related Video