News Hour: ಬೂದಿ ಮುಚ್ಚಿದ ಕೆಂಡದಂತಿರುವ ನಗರ್ತಪೇಟೆ!

ಚುನಾವಣಾ ಸಂದರ್ಭದಲ್ಲಿ ಹಿಂದು-ಮುಸ್ಲಿಂ ಕದನ ಜೋರಾಗಿದೆ. ಅಜಾನ್‌ ಟೈಮ್‌ನಲ್ಲಿ ಹನುಮಾನ್‌ ಚಾಲೀಸಾ ಹಾಕಿದ ಎನ್ನುವ ಕಾರಣಕ್ಕೆ ಬೆಂಗಳೂರಿನ ನಗರ್ತಪೇಟೆಯಲ್ಲಿ ಹಿಂದು ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.19): ಉದ್ಯಾನನಗರಿಯ ನಗರ್ತ್​ಪೇಟೆಯ ಸಿದ್ದಣ್ಣಗಲ್ಲಿ ಈಗ ಬೂದಿ ಮುಚ್ಚಿದ ಕೆಂಡವಾಗಿದೆ. ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಕ್ಯಾತೆ ಮಾಡಿದ್ದಲ್ಲದೆ, ಮೊಬೈಲ್ ಅಂಗಡಿಯ ಮಾಲೀಕನಿಗೆ ಮುಸ್ಲಿಮರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಅಜಾನ್ ವೇಳೆಯೇ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಐವರು ಹಲ್ಲೆಕೋರರು ಅರೆಸ್ಟ್ ಆಗಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮಂಗಳವಾರ ಭಾರೀ ಪ್ರತಿಭಟನೆ ನಡೆಸಲಾಗಿದ್ದು, ಪೊಲೀಸರ ಜತೆ ವಾಗ್ವಾದ,ಹೈಡ್ರಾಮಾ, ತಳ್ಳಾಟ.. ನೂಕಾಟ ನಡೆದಿದೆ.

LRC: ಅಜಾನ್‌ ಟೈಮ್‌ನಲ್ಲಿ ಹನುಮಾನ್‌, ಮುಸ್ಲಿಂ ಪುಂಡರಿಂದ ನಗರ್ತಪೇಟೆ ಉದ್ವಿಗ್ನ!

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಕೆಲ ಬಿಜೆಪಿ ಶಾಸಕರು, ಕಾರ್ಯಕರ್ತರನ್ನಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿದ್ದಣ್ಣಗಲ್ಲಿ ಗಲಾಟೆ ಹಿಂದೆ ಹಿಂದೂಗಳ ಒಕ್ಕೆಲೆಬ್ಬಿಸುವ ತಂತ್ರ ಇದೆಯಾ ಎನ್ನುವ ಅನುಮಾನ ಕಾಡಿದೆ.

Related Video