LRC: ಅಜಾನ್‌ ಟೈಮ್‌ನಲ್ಲಿ ಹನುಮಾನ್‌, ಮುಸ್ಲಿಂ ಪುಂಡರಿಂದ ನಗರ್ತಪೇಟೆ ಉದ್ವಿಗ್ನ!

ಅಜಾನ್‌ ಮೊಳಗುತ್ತಿದ್ದ ಟೈಮ್‌ನಲ್ಲಿ ಹನುಮಾನ್‌ ಚಾಲೀಸಾ ಹಾಕುತ್ತಿದ್ದ ಎನ್ನುವ ಏಕೈಕ ಕಾರಣಕ್ಕೆ ಬೆಂಗಳೂರಿನ ನಗರ್ತಪೇಟೆಯಲ್ಲಿ ಮುಸ್ಲಿಂ ಪುಂಡರು ಹಿಂದು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಘಟನೆಗೆ ಇಡೀ ಪ್ರದೇಶ ಉದ್ವಿಗ್ನವಾಗಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.19): ಉದ್ಯಾನನಗರಿಯ ನಗರ್ತಪೇಟೆ ನಿಗಿನಿಗಿ ಕೆಂಡವಾಗಿದೆ. ಅಜಾನ್‌ ಟೈಮ್‌ನಲ್ಲಿ ಹನುಮಾನ್‌ ಚಾಲೀಸಾ ಹಾಕುತ್ತಿದ್ದ ಕಾರಣಕ್ಕೆ ನಗರ್ತಪೇಟೆಯಲ್ಲಿ ಹಿಂದು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ರಾಜಕೀಯ ಶುರುವಾಗಿದೆ.

ಒಂದೆಡೆ ಕಾಂಗ್ರೆಸ್‌, ಹಲ್ಲೆ ಮಾಡಿದವರಲ್ಲಿ ಕೇವಲ ಮುಸ್ಲಿಮರು ಮಾತ್ರವಲ್ಲ ಕೆಲ ಹಿಂದೂಗಳು ಇದ್ದರು ಎನ್ನುವ ಅರ್ಥದಲ್ಲಿ ಮಾತನಾಡಿದ್ದರೆ, ಬಿಜೆಪಿ ಮಾತ್ರ ಇದು ಹೀಗಾಗಿರಲು ಸಾಧ್ಯವೇ ಇಲ್ಲ ಎಂದಿದೆ.

ನಗರ್ತಪೇಟೆ ಹನುಮಾನ್ ಚಾಲೀಸಾ ರ್ಯಾಲಿ, ತೇಜಸ್ವಿ ಸೂರ್ಯ ಮೇಲೆ ಕಾಂಗ್ರೆಸ್ ದೂರು; ವಶಕ್ಕೆ ಪಡೆದ ಪೊಲೀಸ್!

ಇದರ ನಡುವೆ ಮಂಗಳವಾರ ಬಿಜೆಪಿ ನಗರ್ತಪೇಟೆಯ ಸಿದ್ಧಣ್ಣಗಲ್ಲಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದೆ. ಸ್ಥಳೀಯ ಬಿಜೆಪಿ ಶಾಸಕರೊಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ ಅವರನ್ನೂ ಬಂಧಿಸಲಾಗಿದೆ.

Related Video