Asianet Suvarna News Asianet Suvarna News

Karnataka Budget: ಸರ್ಕಾರದ ವಿರುದ್ಧ ‘ಮೈತ್ರಿ’ ಅಸ್ತ್ರ: ಗದ್ದಲದ ನಡುವೆಯೇ ರಾಜ್ಯ ಬಜೆಟ್‌ ಮಂಡನೆಗೆ ಸಜ್ಜು !

ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣ
ಸರ್ಕಾರದ ಇಲ್ಲಿವರೆಗಿನ ಪ್ರಗತಿ ರಿಪೋರ್ಟ್ ಮಂಡನೆ
ನಾಳೆಯಿಂದ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ 

First Published Feb 12, 2024, 1:37 PM IST | Last Updated Feb 12, 2024, 1:37 PM IST

ಇಂದು ರಾಜ್ಯ ಬಜೆಟ್ ಅಧಿವೇಶ ಆರಂಭವಾಗಿದೆ. ಸದನ ಕದನಕ್ಕೆ ಮೂರು ಪಕ್ಷಗಳು ಸಜ್ಜಾಗಿವೆ. ಆರೋಪ ಪ್ರತ್ಯಾರೋಪಕ್ಕೆ ಸದನ ಸಾಕ್ಷಿಯಾಗಲಿದೆ. ಈ ಬಾರಿ ಸದನದಲ್ಲಿ(Session) ಕೇಂದ್ರ ಅನುದಾನದಲ್ಲಿ ತಾರತಮ್ಯ ಮಾಡಿದೆ ಎಂಬ ವಿಷಯ ಸಹ ಗದ್ದಲ ಎಬ್ಬಿಸಬಹುದು. ಗದ್ದಲದ ನಡುವೆಯೇ ಮತ್ತೊಂದು ಬಜೆಟ್(Budget) ಮಂಡನೆಗೆ ರಾಜ್ಯ ಸರ್ಕಾರ ಸಜ್ಜಾಗಿದೆ. ಫೆಬ್ರವರಿ 16ಕ್ಕೆ ಸಿದ್ದರಾಮಯ್ಯ(Siddaramaiah) ಬಜೆಟ್  ಮಂಡನೆ ಮಾಡಲಿದ್ದಾರೆ. ಇಂದು ರಾಜ್ಯಪಾಲರು(Governor) ಭಾಷಣ ಮಾಡಿದ್ದು, ನಾಳೆಯಿಂದ ಇದರ ಮೇಲೆಯೇ ಚರ್ಚೆ ನಡೆಯಲಿದೆ. ಚರ್ಚೆ ವೇಳೆ ಗದ್ದಲ, ಕೋಲಾಹಲಗಳು ಆಗುವುದು ಪಕ್ಕಾ ಎನ್ನಲಾಗ್ತಿದೆ. ಸರ್ಕಾರ ಕಟ್ಟಿ ಹಾಕಲು ಮೈತ್ರಿ ಪಕ್ಷಗಳು ಈಗಾಗಲೇ ಪ್ಲ್ಯಾನ್‌ ಮಾಡಿಕೊಂಡಿವೆ.

ಇದನ್ನೂ ವೀಕ್ಷಿಸಿ:  ಹಳೆ ಮೈಸೂರು ದಿಗ್ವಿಜಯಕ್ಕೆ ಅಮಿತ್‌ ಶಾ ರಣತಂತ್ರ: ಮೈತ್ರಿ ವಿರೋಧಿಗಳಿಗೆ ವಾರ್ನ್..ರಾಜ್ಯಾಧ್ಯಕ್ಷರಿಗೆ ಟಾಸ್ಕ್ !