ಹಳೆ ಮೈಸೂರು ದಿಗ್ವಿಜಯಕ್ಕೆ ಅಮಿತ್‌ ಶಾ ರಣತಂತ್ರ: ಮೈತ್ರಿ ವಿರೋಧಿಗಳಿಗೆ ವಾರ್ನ್..ರಾಜ್ಯಾಧ್ಯಕ್ಷರಿಗೆ ಟಾಸ್ಕ್ !

ಸಿಎಂ ತವರಿನಿಂದಲೇ ಬಿಜೆಪಿ ‘ಲೋಕ’ಸಮರ ತಾಲೀಮು 
ಮೈತ್ರಿ ವಿರೋಧಿಗಳಿಗೆ ವಾರ್ನ್.. ರಾಜ್ಯಾಧ್ಯಕ್ಷರಿಗೆ ಟಾಸ್ಕ್ 
ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರದ ಬಗ್ಗೆಯೂ ಚರ್ಚೆ

Share this Video
  • FB
  • Linkdin
  • Whatsapp

ಸಿಎಂ ತವರಿನಿಂದಲೇ ಬಿಜೆಪಿ ‘ಲೋಕ’ಸಮರ ತಾಲೀಮು ಆರಂಭಿಸಿದೆ. ಮೈತ್ರಿ ವಿರೋಧಿಗಳಿಗೆ ವಾರ್ನ್‌ ಕೊಟ್ಟಿದ್ದು, ರಾಜ್ಯಾಧ್ಯಕ್ಷರಿಗೆ ಟಾಸ್ಕ್ ನೀಡಲಾಗಿದೆ. ಹಳೆ ಮೈಸೂರು(Mysore) ದಿಗ್ವಿಜಯಕ್ಕೆ ಅಮಿತ್ (Amit Shah)ಚುನಾವಣಾ ರಣತಂತ್ರ ಹೂಡಿದಂತೆ ಕಾಣುತ್ತಿದೆ. ಸುತ್ತೂರು ಮಠದ(Suttur Math) ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಮಿತ್ ಶಾ, ಮೈಸೂರಿನಲ್ಲೇ ಸಭೆ ನಡೆಸಿ ಲೋಕಸಭೆಗೆ(Loksabha) ರಣತಂತ್ರ ಹೂಡಿದ್ದಾರೆ. ಮೈಸೂರಿನಲ್ಲಿ ಹೈವೋಲ್ಟೇಜ್ ಕೋರ್ ಕಮಿಟಿ ಸಭೆ ನಡೆದಿದೆ. ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗ್ತಿದೆ. ಮೈತ್ರಿ ವಿಚಾರದ ಅಪಸ್ವರಕ್ಕೆ ಮದ್ದರೆಯುವ ಯತ್ನ ಮಾಡಲಾಗಿದೆ. ಮೈತ್ರಿ ವಿರೋಧಿಗಳಿಗೆ ಖಡಕ್ ವಾರ್ನ್‌ನನ್ನು ಅಮಿತ್ ಶಾ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಅಮಿತ್ ಶಾ ಒನ್ ಟು ಒನ್ ಮೀಟಿಂಗ್ ಮಾಡಿದ್ದು, ಜೆಡಿಎಸ್(JDS)-ಬಿಜೆಪಿ(BJP) ನಡುವಿನ ಕ್ಷೇತ್ರ ಹಂಚಿಕೆ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. 28 ಕ್ಷೇತ್ರಗಳಲ್ಲೂ ಗೆಲ್ಲುವ ಬಗ್ಗೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: Narayanasa Bhandage: ರಾಜ್ಯಸಭಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ನಾರಾಯಣಸಾ ಭಾಂಡಗೆ ಆಯ್ಕೆಗೆ ಕಾರಣಗಳೇನು ?

Related Video