Asianet Suvarna News Asianet Suvarna News

ಗೋಳಗುಮ್ಮಟಕ್ಕಿಲ್ಲ UNESCO ಸ್ಥಾನಮಾನ: ಅಧಿಕಾರಿಗಳ ನಿರ್ಲಕ್ಷ್ಯ..ಪಾರಂಪರಿಕ ಕಟ್ಟಡಕ್ಕಿಲ್ಲ ವಿಶ್ವ ಮನ್ನಣೆ

ವಿಜಯಪುರ ಗೋಳಗುಮ್ಮಟ ಅಂದ್ರೆ ಅದು ವಿಶ್ವಪರಂಪರಿಕ ಕಟ್ಟಡ ಎಂದೇ ಫೇಮಸ್. ವಿಭಿನ್ನ ಇತಿಹಾಸ ಹೊಂದಿರುವ ಈ ಗುಮ್ಮಟ್ಟ ಈಗ UNESCO ಸ್ಥಾನಮಾನದಿಂದ ಹೊರಗೆ ಉಳಿದಿದೆ.ಜನಪ್ರತಿನಿಧಿಗಳ,ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಮಾನ್ಯತೆ ಸಿಗದೇ ಅಭಿವೃದ್ಧಿಯಿಂದ ದೂರ ಉಳಿಯುವಂತಾಗಿದೆ.
 

ವಿಭಿನ್ನ ಕಟ್ಟಡ ಶೈಲಿ, ವಿಸ್ಮಯವೆಂಬಂತೆ ಗೋಚರಿಸುವ ಪಿಸುಗುಟ್ಟುವ ಗ್ಯಾಲರಿ. ಇಷ್ಟೇ ಅಲ್ಲ ಅನೇಕ ವಿಸ್ಮಯಗಳಿಂದ ವಿಶ್ವ ವಿಖ್ಯಾತಿ ಪಡೆದಿರೋ ವಿಜಯಪುರದ(Vijayapura) ಗೋಳಗುಮ್ಮಟ(Gol Gumbaz) ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರ್ತಾರೆ. ಸುವರ್ಣ ನ್ಯೂಸ್‌,ಕನ್ನಡಪ್ರಭ ನಡೆಸಿದ್ದ ಕರ್ನಾಟಕದ ಏಳು ಅದ್ಭುತಗಳಲ್ಲಿ ಗೋಳಗುಮ್ಮಟಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಆದ್ರೆ ವಿಶ್ವವಿಖ್ಯಾತ ಗೋಳಗುಮ್ಮಟ UNESCO ಸ್ಥಾನಮಾನದಿಂದ ದೂರ ಉಳಿದಿದೆ. ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರುವ ಎಲ್ಲ ಅರ್ಹತೆ ಇದ್ರೂ ಜನಪ್ರತಿನಿಧಿಗಳು,ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇದುವರೆಗೂ ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಐತಿಹಾಸಿಕ ತಾಣ ಪಾರಂಪರಿಕ ಪಟ್ಟಿಗೆ ಸೇರಿಬೇಕಾದ್ರೆ ಯುನೆಸ್ಕೋದ ನಿಬಂಧನೆ, ಮಾನದಂಡಗಳನ್ನು  ಜಿಲ್ಲಾಡಳಿತ ಮುಖ್ಯ ಕಾರ್ಯದರ್ಶಿಗೆ ಕಡತಗಳನ್ನ ಸಲ್ಲಿಸಬೇಕಿತ್ತು. ಇದಾದ ಬಳಿಕ ಕೇಂದ್ರಸರ್ಕಾರ ಜೊತೆಗೆ ಯುನೆಸ್ಕೋವರೆಗೂ ಈ ಪ್ರಸ್ತಾವನೆ ಸಲ್ಲಿಕೆ ಆಗುತ್ತೆ. ಬಳಿಕ ಈ ಪಟ್ಟಿ ಪರಿಶೀಲಿಸಿ ಯುನೆಸ್ಕೋ ತಂಡ ಪಾರಂಪರಿಕ ಕಟ್ಟಡಕ್ಕೆ ಮಾನ್ಯತೆ ನೀಡುತ್ತೆ..ಆದ್ರೆ ವಿಜಯಪುರ ಡಿಸಿ ಯುನೆಸ್ಕೋ ಮಾನದಂಡ ಪಾಲನೆ ಮಾಡದೇ ಇರೋದೆ ಪಾರಂಪರಿಕ ಪಟ್ಟಿಯಿಂದ ಹೊರಗುಳಿಯೋಕೆ ಕಾರಣವಾಗಿದೆ ಅಂತಾ ಇತಿಹಾಸ ತಜ್ಞರು ಹೇಳ್ತಿದ್ದಾರೆ.ಇತ್ತ ಸಂಸದ ರಮೇಶ ಜಿಗಜಿಣಗಿ ಕೂಡಲೇ ಕೇಂದ್ರಕ್ಕೆ ಪತ್ರ ಬರೆಯೋದಾಗಿ ಹೇಳಿದ್ರು.

ಇದನ್ನೂ ವೀಕ್ಷಿಸಿ:  ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ಕೊಟ್ಟ ಸಚಿವರು: ನರ್ವ್ ಸೆಂಟರ್ ಆರಂಭ, ಫೋನ್‌ನಲ್ಲೇ ಸಿಗುತ್ತೆ ಆರೋಗ್ಯ !

Video Top Stories