ಇದು ಪುಷ್ಕರಣಿಯೋ, ಕಸ ಕಡ್ಡಿಗಳ ಗುಡ್ಡೆಯೋ? ಗೋಕರ್ಣದ ಮಹಾಬಲೇಶ್ವರ ಪುಷ್ಕರಣಿಯ ದುರಾವಸ್ಥೆ ಇದು!
ಪುಣ್ಯ ಸ್ನಾನ, ಕ್ರಿಯಾ ಕರ್ಮ, ಪಿತೃ ಕಾರ್ಯಗಳನ್ನು ನೆರವೇರಿಸುವ ಇತಿಹಾಸ ಹೊಂದಿರುವ ಪ್ರಸಿದ್ಧ ಕ್ಷೇತ್ರ ಗೋಕರ್ಣ. ಇಲ್ಲಿನ ಮಹಾಬಲೇಶ್ವರ ಪುಷ್ಕರಣಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡುವ ವಾಡಿಕೆ ಇತ್ತು.
ಉತ್ತರ ಕನ್ನಡ (ನ. 26): ಪುಣ್ಯ ಸ್ನಾನ, ಕ್ರಿಯಾ ಕರ್ಮ, ಪಿತೃ ಕಾರ್ಯಗಳನ್ನು ನೆರವೇರಿಸುವ ಇತಿಹಾಸ ಹೊಂದಿರುವ ಪ್ರಸಿದ್ಧ ಕ್ಷೇತ್ರ ಗೋಕರ್ಣ. ಇಲ್ಲಿನ ಮಹಾಬಲೇಶ್ವರ ಪುಷ್ಕರಣಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡುವ ವಾಡಿಕೆ ಇತ್ತು. ಇಲ್ಲಿ 5 ಬಾರಿ ಮುಳುಗಿ ಎದ್ದರೆ ಪಾಪ ಕರ್ಮಗಳು ಪರಿಹಾರವಾಗುತ್ತದೆ ಎಂಬ ನಂಬಿಕೆಯಿತ್ತು.
ದೇವರ ಮನೆಯಲ್ಲಿ ನಾಗಪ್ಪ, ಬುಸ್‌ಗುಡಬೇಡಪ್ಪಾ ಎಂದ ಮನೆಯವರು, ಮುಂದೇನಾಯ್ತು?
ಆದರೆ ಈಗ ಈ ಪುಷ್ಕರಣಿಯಲ್ಲಿ ಮುಳುಗಲು ಜನ ಹಿಂದೇಟು ಹಾಕುತ್ತಿದ್ದಾರೆ. ಕಸ, ಕಡ್ಡಿ, ಪಾಚಿ, ಅನ್ನ, ಪಿಂಡಗಳು, ತುಂಬಿ ಹೋಗಿವೆ. ಇದರ ಸ್ವಚ್ಛತಾ ಕಾರ್ಯದ ಬಗ್ಗೆ ಸರ್ಕಾರವಾಗಲಿ, ಸಂಬಂಧಪಟ್ಟ ಆಡಳಿತ ವರ್ಗವಾಗಲಿ ಗಮನ ಹರಿಸುತ್ತಿಲ್ಲ. ದಯವಿಟ್ಟು ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗಬೇಕು ಎನ್ನುವುದು ಬಿಗ್ 3 ಆಶಯ.