ಗೌರಿ-ಗಣೇಶ ಹಬ್ಬಕ್ಕೆ ಪ್ರಯಾಣ ಮತ್ತಷ್ಟು ದುಬಾರಿ: ಪ್ರಯಾಣಿಕರಿಂದ ಖಾಸಗಿ ಬಸ್‌ಗಳ ಹಗಲು ದರೋಡೆ !
ಗೌರಿ-ಗಣೇಶ ಹಬ್ಬ ಇರುವ ಹಿನ್ನೆಲೆ ಪ್ರಯಾಣಿಕರಿಂದ ದುಬಾರಿ ಹಣ ವಸೂಲಿ ಮಾಡಲು ಖಾಸಗಿ ಬಸ್‌ಗಳು ಮುಂದಾಗಿವೆ.
ಗೌರಿ ಗಣೇಶ ಹಬ್ಬಕ್ಕೆ(gowri ganesha festival) ಇನ್ನೇನು ಕೆಲವು ದಿನಗಳು ಬಾಕಿ ಇದೆ. ಹೀಗಾಗಿ ಹಬ್ಬ ಆಚರಿಸಲು ಜನ ತಮ್ಮೂರಿಗೆ ತೆರಳಲು ರೆಡಿಯಾಗಿದ್ದಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್‌ಗಳ(Private buses) ಮಾಲೀಕರು ಹೆಚ್ಚಿನ ಪ್ರಯಾಣ ದರ ವಿಧಿಸಿ ದಂಧೆಗೆ ಇಳಿದಿದ್ದಾರೆ. ಟಿಕೆಟ್ ದರ(Ticket peice) ಯದ್ವಾತದ್ವಾ ಏರಿಕೆ ಮಾಡಿದ್ದು ಪ್ರಯಾಣಿಕರು ಕಂಗಾಲಾಗಿದ್ದಾರೆ. ಸಾಮಾನ್ಯ ದಿನಗಳಲ್ಲಿ 500 ರಿಂದ 600 ರೂ.ಗಳ ಟಿಕೆಟ್ ದರ ಈಗ 900 ರಿಂದ 2500ವರೆಗೂ ಫಿಕ್ಸ್ ಮಾಡಲಾಗಿದೆ. ಜನ ಹಬ್ಬಕ್ಕೆ ಮುಂಚಿತವಾಗಿಯೇ ಹೊರಟಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಖಾಸಗಿ ಬಸ್ ಮಾಲೀಕರು ಮನಬಂದಂತೆ ದರಗಳನ್ನು ವಿಧಿಸಿ ಪ್ರಯಾಣಿಕರ ಸುಲಿಗೆಗೆ ಇಳಿದಿದ್ದಾರೆ. ಇದು ಕೆಲವು ಸ್ಯಾಂಪಲ್‌ಗಳಷ್ಟೇ. ಬೆಂಗಳೂರಿನಿಂದ(bengaluru) ಬೇರೆ ಬೆರೆ ಜಿಲ್ಲೆಗಳಿಗೆ ಹೊರಡುವ ಎಲ್ಲಾ ರೂಟ್ಗಳಲ್ಲೂ ಇದೇ ರೀರಿ ದರ ಏರಿಕೆ ಬರೆ ಎಳೆಯಲಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆಗೆ ಸಾಲು ಸಾಲು ದೂರುಗಳು ಬಂದ ಬೆನ್ನಲ್ಲೇ ಖಾಸಗಿ ಬಸ್ ಮೇಲೆ ಕಾನೂನು ರೀತಿ ಕ್ರಮಕ್ಕೆ ಮುಂದಾಗಿದೆ. ಒಟ್ಟಿನಲ್ಲಿ ಹಬ್ಬ ಬಂದರೆ ಸಾಕು ಖಾಸಗಿ ಬಸ್ಗಳಿಗೆ ಪ್ರಯಾಣಿಕರ ಸುಲಿಗೆಗೆಗ ರಹದಾರಿಯಾಗಿದೆ. ಸರ್ಕಾರ ಮುತುವರ್ಜಿ ವಹಿಸಿ ಕಡಿವಾಣ ಹಾಕಿದ್ರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇಲ್ಲದಿದ್ರೆ ಖಾಸಗಿ ದಂಧೆ ಎಗ್ಗಿಲ್ಲದೆ ನಡೆಯಲಿದೆ.
ಇದನ್ನೂ ವೀಕ್ಷಿಸಿ: ಸ್ಟಾಲಿನ್ VS ಸನಾತನ ಧರ್ಮ ದಂಗಲ್: ಗಣೇಶ ಪೆಂಡಾಲ್‌ಗೆ ಸನಾತನ ಧರ್ಮ ಹೆಸರಿಡಲು ಸೂಚನೆ..!