Asianet Suvarna News Asianet Suvarna News

ಸ್ಟಾಲಿನ್ VS ಸನಾತನ ಧರ್ಮ ದಂಗಲ್: ಗಣೇಶ ಪೆಂಡಾಲ್‌ಗೆ ಸನಾತನ ಧರ್ಮ ಹೆಸರಿಡಲು ಸೂಚನೆ..!

ಸಚಿವ ಸ್ಟಾಲಿನ್ ಸನಾತನ ಧರ್ಮವನ್ನ ನಿಂದಿಸಿದ್ದೆ ಬಂತು, ಈಗ ಸ್ಟಾಲಿನ್ VS ಸನಾತನ ಧರ್ಮ ದಂಗಲ್ ಶುರುವಾಗಿದೆ. ಅದ್ರಲ್ಲು ಗುಮ್ಮಟನಗರಿ ವಿಜಯಪುರದಲ್ಲಿ ಯುವಕರಲ್ಲಿ ಸನಾತನ ಧರ್ಮದ ಕಿಚ್ಚು ಹೊತ್ತಿಸಲು ಶಾಸಕ ಯತ್ನಾಳ್ ಹೊಸ ಪ್ಲಾನ್ ಮಾಡಿದ್ದಾರೆ. 
 

First Published Sep 14, 2023, 10:21 AM IST | Last Updated Sep 14, 2023, 10:21 AM IST


ಸ್ಟಾಲಿನ್ ಪುತ್ರ ಕೊಟ್ಟ ಸನಾತನ(sanatana) ಧರ್ಮ ನಿರ್ಮೂಲನೆ ಹೇಳಿಕೆ ಹಿಂದೂಗಳನ್ನ ಕೆರಳಿಸಿದೆ. ಈಗಾಗಲೇ ಉದಯನಿಧಿ(Udayanidhi) ಹೇಳಿಕೆ ವಿರುದ್ಧ ಪ್ರತಿಭಟನೆ, ಆಕ್ರೋಶ, ದೂರುಗಳು ದಾಖಲಾಗಿವೆ.. ಈಗ ವಿಜಯಪುರ(vijayapur) ಶಾಸಕರು ಸ್ಟಾಲಿನ್ ಪುತ್ರನಿಗೆ ವಿಭಿನ್ನ ರೀತಿ ತಿರುಗೇಟು ನೀಡಲು ಮುಂದಾಗಿದ್ದಾರೆ. ಗಣೇಶನ ಹಬ್ಬದಲ್ಲಿ ಸನಾತನ ಧರ್ಮ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ. ವಿಜಯಪುರ ನಗರದ 35 ವಾರ್ಡ್ ಗಳಲ್ಲಿರುವ 415ಕ್ಕೂ ಅಧಿಕ ಗಜಾನನ ಉತ್ಸವ ಮಂಡಳಿಗಳಿವೆ. ಈ ಮಂಡಳಿಗಳಿಗೆ ಸ್ವಾಮಿ ವಿವೇಕಾನಂದ ಸೇನೆಯ ಮೂಲಕ ತಲಾ 5ಸಾವಿರ ರೂಪಾಯಿ ನೀಡಿ ಹಿಂದೂಗಳ ಹಬ್ಬಕ್ಕೆ ಯತ್ನಾಳ (Basanagowda Patil Yatnal)ಸಪೋರ್ಟ್ ಮಾಡಿದ್ದಾರೆ. ಅಷ್ಟೆ ಅಲ್ಲದೆ ಎಲ್ಲಾ ಗಣೇಶೋತ್ಸವ ಮಂಟಪದಲ್ಲೂ ಸನಾತನ ಹಿಂದೂ ವೇದಿಕೆ ಎಂದು ನಾಮಕರಣ ಮಾಡುವಂತೆ ಕರೆ ಕೊಟ್ಟಿದ್ದಾರೆ. 5 ಸಾವಿರ ನಗದು ಜೊತೆಗೆ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಭಾವಚಿತ್ರವನ್ನೂ ಉಡುಗೊರೆಯಾಗಿ ನೀಡುತ್ತಿದ್ದಾರೆ. ಇದಕ್ಕಾಗಿ ಸುಮಾರು 25ಲಕ್ಷ ರೂಪಾಯಿಗಳ ವರೆಗೆ ಶಾಸಕರು ಖರ್ಚು ಮಾಡುತ್ತಿದ್ದಾರೆ.  ಈ ಮೂಲಕ ಸತಾನದ ಧರ್ಮ ವಿರೋಧೀಗಳಿಗೆ ಗಣೇಶೋತ್ಸವ ಮೂಲಕ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ. ಇನ್ನು ವೀರ್ ಸಾವರ್ಕರ್ ಬಗ್ಗೆಯೂ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಹೀಗಾಗಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಜೊತೆಗೆ ಸ್ಥಳದಲ್ಲಿ ವೀರ್ ಸಾವರ್ಕರ್(Veer Savarkar) ಭಾವಚಿತ್ರ ಇಡುವಂತೆ ಪ್ರೇರೇಪಿಸುತ್ತಿದ್ದಾರೆ. ಸನಾತನಕ್ಕೆ ಆದ ಅವಮಾನವನ್ನ ಚಾಲೆಂಜ್ ಆಗಿ ತೆಗೆದುಕೊಂಡಿರುವ ಶಾಸಕ ಯತ್ನಾಳ್ ಹಾಗೂ ವಿವೇಕಾನಂದ ಸೇನೆ ಗಣೇಶ ಹಬ್ಬಕ್ಕೆ ಬೇಕಾದ ಸಹಾಯ, ಸಹಕಾರವನ್ನು ಮಾಡುತ್ತಿದೆ. ಜೊತೆಗೆ ಸನಾತನ ಧರ್ಮದ ಬಗ್ಗೆ ಯುವ ಸಮುದಾಯದಲ್ಲಿ ಹೊಸ ಕಿಚ್ಚು ಹಬ್ಬಿಸುತ್ತಿದೆ.

ಇದನ್ನೂ ವೀಕ್ಷಿಸಿ:  ಅನ್ನದಾತರಿಗೆ ಕಂಟಕವಾಗಿವೆ ಕೆಮಿಕಲ್ ಫ್ಯಾಕ್ಟರಿ! ಕೆಮಿಕಲ್ ತ್ಯಾಜ್ಯದಿಂದ ರೈತರ ಬದುಕೇ ಬರ್ಬಾದ್

Video Top Stories