ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ, ಹಿಂದಿದೆಯಾ ಈ ನಿರ್ಮಾಪಕರ ಷಡ್ಯಂತ್ರ.?
ನಟ ದರ್ಶನ್ ತೂಗುದೀಪ ಅವರಿಗೆ ಸೇರಿದ ಮೈಸೂರಿನ ಆಸ್ತಿ ಪತ್ರಗಳನ್ನು ಫೋರ್ಜರಿ ಮಾಡಿ, ದರ್ಶನ್ ಸ್ನೇಹಿತರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಬ್ಯಾಂಕ್ ನಕಲಿ ಮಹಿಳಾ ಅಧಿಕಾರಿಯನ್ನು ಮೈಸೂರಿನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೈಸೂರು (ಜು. 12): ನಟ ದರ್ಶನ್ ತೂಗುದೀಪ ಅವರಿಗೆ ಸೇರಿದ ಮೈಸೂರಿನ ಆಸ್ತಿ ಪತ್ರಗಳನ್ನು ಫೋರ್ಜರಿ ಮಾಡಿ, ದರ್ಶನ್ ಸ್ನೇಹಿತರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಬ್ಯಾಂಕ್ ನಕಲಿ ಮಹಿಳಾ ಅಧಿಕಾರಿ ಅರುಣಾ ಕುಮಾರಿಯನ್ನು ಮೈಸೂರಿನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಟ ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ ಯತ್ನ, ವಂಚಕಿ ವಶಕ್ಕೆ, ಮುಂದುವರೆದ ತನಿಖೆ
ಈ ಪ್ರಕರಣ ಬಗ್ಗೆ ತನಿಖೆ ನಡೆಯುತ್ತಾ ಹೋದಂತೆಲ್ಲಾ ಹೊಸ ಹೊಸ ಆಯಾಮಗಳು ಸಿಗುತ್ತಿದೆ. ನಿರ್ಮಾಪಕ ಉಮಾಪತಿ ಸುತ್ತ ಅನುಮಾನ ಸುತ್ತುತ್ತಿದೆ. ದರ್ಶನ್ ಸ್ನೇಹಿತ ಹರ್ಷಗೆ ಅರುಣಾ ಕುಮಾರಿಯನ್ನು ಪರಿಚಯಿಸಿದ್ದು ಉಮಾಪತಿ ಎನ್ನಲಾಗಿದೆ. ನಂತರ ಅರುಣಾ ಕುಮಾರಿ ದರ್ಶನ್ ಸ್ನೇಹಿತರನ್ನು ಭೇಟಿಯಾಗಿದ್ದಾರೆ. ಅರುಣಾಕುಮಾರಿ ಅರೆಸ್ಟ್ ಆಗುತ್ತಿದ್ದಂತೆ ಉಮಾಪತಿ ಯೂ ಟರ್ನ್ ಹೊಡೆದಿದ್ದಾರೆ.