
'ನನಗೆ ಯಾವುದೇ ರಾಜಕೀಯ ದ್ವೇಷ ಇಲ್ಲ' ಅಖಂಡಗೆ ಪ್ರಸನ್ನಕುಮಾರ್ ತಿರುಗೇಟು
ಗಲಭೆಯಲ್ಲಿ ಪ್ರಸನ್ನಕುಮಾರ್ ಪಾತ್ರವಿದೆ ಎಂದಿರುವ ಅಖಂಡ ಹೇಳಿಕೆ ಬಗ್ಗೆ ಪ್ರಸನ್ನ ಕುಮಾರ್, ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಇವೆಲ್ಲಾ ನಾನ್‌ಸೆನ್ಸ್ ಹೇಳಿಕೆ. ನಾನು ಯಾವತ್ತೂ ಈ ರೀತಿ ಕೆಲಸಕ್ಕೆ ಕೈ ಹಾಕುವುದಿಲ್ಲ. ನನಗೆ ಯಾವುದೇ ರಾಜಕೀಯ ದ್ವೇಷ ಇಲ್ಲ' ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಬೆಂಗಳೂರು (ಆ. 20): ಗಲಭೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಪೊಲೀಸ್ ತನಿಖೆ ಕೆಲವು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಗಲಭೆ ಹಿಂದೆ ಕಾಂಗ್ರೆಸ್ ನಾಯಕರ ಕೈ ಇದೆ ಎಂದಿದ್ದಾರೆ. ಗಲಭೆಗೆ 2 ತಿಂಗಳಿಂದ ಕಾಂಗ್ರೆಸ್ ನಾಯಕರೇ ಸಂಚು ಹೆಣೆದಿದ್ದಾರೆ. ಪುಲಕೇಶಿ ನಗರ ಜೆಡಿಎಸ್ ಹಾಗೂ ಎಸ್‌ಡಿಪಿಐ ನಾಯಕರ ಜೊತೆ ಸೇರಿ ಸಂಚು ರೂಪಿಸಿದ್ದಾರೆ. ಈ ಗಲಭೆಯಲ್ಲಿ ಮಾಜಿ ಶಾಸಕ ಬಿ ಪ್ರಸನ್ನ ಕುಮಾರ್ ಕೈವಾಡ ಇದೆ ಎಂದು ಹೇಳಿದ್ದಾರೆ. ಕಾರ್ಪೋರೇಟರ್ ಜಾಕಿರ್, ಎಸ್‌ಡಿಪಿಐ ನಾಯಕ ಮುಜಾಮಿಲ್ ಜೊತೆ ಸೇರಿ ಸಂಚು ರೂಪಿಸಿದ್ದಾರೆ ಎಂದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಗಲಭೆಗೆ ಕಾಂಗ್ರೆಸ್ ನಾಯಕರ ಕುಮ್ಮಕ್ಕಿದೆ: ಅಖಂಡರಿಂದ 'ಬೆಂಕಿ' ಹೇಳಿಕೆ
ಈ ಬಗ್ಗೆ ಪ್ರಸನ್ನ ಕುಮಾರ್, ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಇವೆಲ್ಲಾ ನಾನ್‌ಸೆನ್ಸ್ ಹೇಳಿಕೆ. ನಾನು ಯಾವತ್ತೂ ಈ ರೀತಿ ಕೆಲಸಕ್ಕೆ ಕೈ ಹಾಕುವುದಿಲ್ಲ. ನನಗೆ ಯಾವುದೇ ರಾಜಕೀಯ ದ್ವೇಷ ಇಲ್ಲ' ಎಂದು ಸ್ಪಷ್ಟೀಕರಣ ನೀಡಿದ್ದಾರೆ.