ಗಲಭೆಗೆ ಕಾಂಗ್ರೆಸ್ ನಾಯಕರ ಕುಮ್ಮಕ್ಕಿದೆ: ಅಖಂಡರಿಂದ 'ಬೆಂಕಿ' ಹೇಳಿಕೆ

ಬೆಂಗಳೂರು ಗಲಭೆಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಪೊಲೀಸ್ ತನಿಖೆ ಕೆಲವು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಗಲಭೆ ಹಿಂದೆ ಕಾಂಗ್ರೆಸ್ ನಾಯಕರ ಕೈ ಇದೆ ಎಂದಿದ್ದಾರೆ. ಗಲಭೆಗೆ 2 ತಿಂಗಳಿಂದ ಕಾಂಗ್ರೆಸ್ ನಾಯಕರೇ ಸಂಚು ಹೆಣೆದಿದ್ದಾರೆ. ಪುಲಕೇಶಿ ನಗರ ಜೆಡಿಎಸ್ ಹಾಗೂ ಎಸ್‌ಡಿಪಿಐ ನಾಯಕರ ಜೊತೆ ಸೇರಿ ಸಂಚು ರೂಪಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 20): ಬೆಂಗಳೂರು ಗಲಭೆಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಪೊಲೀಸ್ ತನಿಖೆ ಕೆಲವು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಗಲಭೆ ಹಿಂದೆ ಕಾಂಗ್ರೆಸ್ ನಾಯಕರ ಕೈ ಇದೆ ಎಂದಿದ್ದಾರೆ. ಗಲಭೆಗೆ 2 ತಿಂಗಳಿಂದ ಕಾಂಗ್ರೆಸ್ ನಾಯಕರೇ ಸಂಚು ಹೆಣೆದಿದ್ದಾರೆ. ಪುಲಕೇಶಿ ನಗರ ಜೆಡಿಎಸ್ ಹಾಗೂ ಎಸ್‌ಡಿಪಿಐ ನಾಯಕರ ಜೊತೆ ಸೇರಿ ಸಂಚು ರೂಪಿಸಿದ್ದಾರೆ. ಈ ಗಲಭೆಯಲ್ಲಿ ಮಾಜಿ ಶಾಸಕ ಬಿ ಪ್ರಸನ್ನ ಕುಮಾರ್ ಕೈವಾಡ ಇದೆ ಎಂದು ಹೇಳಿದ್ದಾರೆ. ಕಾರ್ಪೋರೇಟರ್ ಜಾಕಿರ್, ಎಸ್‌ಡಿಪಿಐ ನಾಯಕ ಮುಜಾಮಿಲ್ ಜೊತೆ ಸೇರಿ ಸಂಚು ರೂಪಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗ್ಳೂರು ಗಲಭೆ: ಕಿಂಗ್‌ ಪಿನ್‌ಗಳ ವಿರುದ್ಧ UAPA ಅಸ್ತ್ರ ಪ್ರಯೋಗ

ಮಾಜಿ ಮೇಯರ್ ಸಂಪತ್ ರಾಜ್ ಆಪ್ತ ಅರುಣ್ ಗಲಭೆಕೋರರಿಗೆ ಕಂತೆ ಕಂತೆಗಟ್ಟಲೇ ಹಣ ನೀಡಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಮಾಡಿದ ಪ್ಲಾನ್ ಇದು. ನನ್ನ ಅಕ್ಕನ ಮಗನ ಮೇಲೆ ಬಂದೂಕಿಟ್ಟು ನನಗೆ ಗುಂಡು ಹಾಕಿದ್ದಾರೆ' ಎಂದು ಅಖಂಡ ಹೇಳಿಕೆ ನೀಡಿದ್ದಾರೆ. 

Related Video