Asianet Suvarna News Asianet Suvarna News

ಕೊರೋನಾ ವಾರಿಯರ್ಸ್‌ಗೆ ಹೀಗಾದ್ರೆ, ಸಾಮಾನ್ಯರ ಪಾಡೇನು..?

ಬೆಂಗಳೂರಿನಲ್ಲಿ 8 ಉಸ್ತುವಾರಿ ದಿಕ್ಪಾಲಕರು, ಏಳು ಸಚಿವರು, 28 ಶಾಸಕರು 198 ಕಾರ್ಪೊರೇಟರ್‌ಗಳು ಹಾಗೂ ಸಾವಿರಾರು ಅಧಿಕಾರಿಗಳಿದ್ದರೂ ಬೆಂಗಳೂರು ಕೊರೋನಾ ಅಟ್ಟಹಾಸಕ್ಕೆ ನಲುಗಿ ಹೋಗಿದೆ. ಜೀವ ಉಳಿಸಿ ಅಂತಾ ಬೇಡಿಕೊಂಡರೂ ಆ ಅಧಿಕಾರಿಯ ಜೀವ ಉಳಿಸಲು ಬಿಬಿಎಂಪಿಗೆ ಸಾಧ್ಯವಾಗಲಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಜು.16): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಬಿಎಂಪಿಗೆ ಕೊರೋನಾ ವಾರಿಯರ್ಸ್ ಜೀವವನ್ನೇ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತದ್ದರಲ್ಲಿ ಸಾಮಾನ್ಯ ಜನರ ಪಾಡೇನು ಎನ್ನುವ ಪ್ರಶ್ನೆ ಶುರುವಾಗಿದೆ.

ಬೆಂಗಳೂರಿನಲ್ಲಿ 8 ಉಸ್ತುವಾರಿ ದಿಕ್ಪಾಲಕರು, ಏಳು ಸಚಿವರು, 28 ಶಾಸಕರು 198 ಕಾರ್ಪೊರೇಟರ್‌ಗಳು ಹಾಗೂ ಸಾವಿರಾರು ಅಧಿಕಾರಿಗಳಿದ್ದರೂ ಬೆಂಗಳೂರು ಕೊರೋನಾ ಅಟ್ಟಹಾಸಕ್ಕೆ ನಲುಗಿ ಹೋಗಿದೆ. ಜೀವ ಉಳಿಸಿ ಅಂತಾ ಬೇಡಿಕೊಂಡರೂ ಆ ಅಧಿಕಾರಿಯ ಜೀವ ಉಳಿಸಲು ಬಿಬಿಎಂಪಿಗೆ ಸಾಧ್ಯವಾಗಲಿಲ್ಲ.

ಕೊರೋನಾ ಕಮಾಂಡರ್‌ವೊಬ್ಬರ ಜೀವ ಉಳಿಸಲಾಗದೇ ಕೈಚೆಲ್ಲಿದ ಬಿಬಿಎಂಪಿ..!

ಕ್ವಾರಂಟೈನ್ ಕೇಂದ್ರದಲ್ಲಿ ಸುಮಾರು ಒಂದುವರೆ ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಅಲೆದು ಅಲೆದು BBMP ವರ್ಕ್ ಇನ್ಸ್‌ಪೆಕ್ಟರ್ ಕೊನೆಯುಸಿರೆಳೆದಿದ್ದರು. ಈ ಕುರಿತಾದ ಬೆಳಕು ಚೆಲ್ಲುವ ರಿಪೋರ್ಟ್ ಇಲ್ಲಿದೆ ನೋಡಿ