Asianet Suvarna News Asianet Suvarna News

ಕೊರೋನಾ ಕಮಾಂಡರ್‌ವೊಬ್ಬರ ಜೀವ ಉಳಿಸಲಾಗದೇ ಕೈಚೆಲ್ಲಿದ ಬಿಬಿಎಂಪಿ..!

ಶಿವನಗರದ ಬಿಬಿಎಂಪಿ ವರ್ಕ್ ಇನ್ಸ್‌ಪೆಕ್ಟರ್ ಇದೀಗ ಬಿಬಿಎಂಪಿ ನಿರ್ಲಕ್ಷ್ಯ ವ್ಯವಸ್ಥೆಗೆ ಬಲಿಯಾಗಿದ್ದಾರೆ. ಬಿಬಿಎಂಪಿ ಅಧಿಕಾರಿ ಒಂದುವರೆ ತಿಂಗಳುಗಳ ಕಾಲ ರೈಲ್ವೇ ಸ್ಟೇಷನ್‌ನಲ್ಲಿ ಕ್ವಾರಂಟೈನ್ ಡ್ಯೂಟಿ ಮಾಡಿದ್ದಾರೆ. ಮಳೆಯಲ್ಲೇ ನೆನೆದುಕೊಂಡು ಎರಡು ದಿನ ಕೆಲಸ ನಿರ್ವಹಿಸಿದ್ದಾರೆ. ಆದರೆ ಈ ಕೊರೋನಾ ಕಮಾಂಡರ್ ಜೀವ ಉಳಿಸಲಾಗದೇ ಬಿಬಿಎಂಪಿ ಕೈಚೆಲ್ಲಿದೆ.

ಬೆಂಗಳೂರು(ಜು.16): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಅಬ್ಬರ ಜೋರಾಗಿದೆ. ಇದೇ ವೇಳೆ ಬಿಬಿಎಂಪಿಯ ದಿವ್ಯನಿರ್ಲಕ್ಷ್ಯ ಮತ್ತೊಮ್ಮೆ ಬಟಾಬಯಲಾಗಿದೆ. ಡೋಂಟ್ ಕೇರ್, ಕೇರ್ ಲೆಸ್ ಬಿಬಿಎಂಪಿ ಕಥೆಯನ್ನು ಸುವರ್ಣ ನ್ಯೂಸ್ ನಿಮ್ಮ ಮುಂದೆ ಬಿಚ್ಚಿಟ್ಟಿದೆ ನೋಡಿ.

ಹೌದು, ಶಿವನಗರದ ಬಿಬಿಎಂಪಿ ವರ್ಕ್ ಇನ್ಸ್‌ಪೆಕ್ಟರ್ ಇದೀಗ ಬಿಬಿಎಂಪಿ ನಿರ್ಲಕ್ಷ್ಯ ವ್ಯವಸ್ಥೆಗೆ ಬಲಿಯಾಗಿದ್ದಾರೆ. ಬಿಬಿಎಂಪಿ ಅಧಿಕಾರಿ ಒಂದುವರೆ ತಿಂಗಳುಗಳ ಕಾಲ ರೈಲ್ವೇ ಸ್ಟೇಷನ್‌ನಲ್ಲಿ ಕ್ವಾರಂಟೈನ್ ಡ್ಯೂಟಿ ಮಾಡಿದ್ದಾರೆ. ಮಳೆಯಲ್ಲೇ ನೆನೆದುಕೊಂಡು ಎರಡು ದಿನ ಕೆಲಸ ನಿರ್ವಹಿಸಿದ್ದಾರೆ. ಆದರೆ ಈ ಕೊರೋನಾ ಕಮಾಂಡರ್ ಜೀವ ಉಳಿಸಲಾಗದೇ ಬಿಬಿಎಂಪಿ ಕೈಚೆಲ್ಲಿದೆ.

ಬೆಂಗ್ಳೂರು ಲಾಕ್‌ಡೌನ್: 2ನೇ ದಿನದ ರಿಯಾಲಿಟಿ ಚೆಕ್

ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಆ ಅಧಿಕಾರಿಗೆ ಸೂಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಲೇ ಇಲ್ಲ. ಈ ಕುರಿತಂತೆ ಆಸ್ಪತ್ರೆಯ ಬಳಿ ನಿಂತು ಆ ಅಧಿಕಾರಿ ಲಾಯರ್ ಬಳಿ ಫೋನ್‌ ಮೂಲಕ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆ ಅಲೆದು ಅಲೆದು ಸುಸ್ತಾಗಿ ಅ ಅಧಿಕಾರಿ ಕೊನೆಯುಸಿರೆಳೆದಿದ್ದಾರೆ. ಬಿಬಿಎಂಪಿ ಉನ್ನತ ಅಧಿಕಾರಿಗಳು, ಅಷ್ಟದಿಕ್ಪಾಲಕ ಸಚಿವರೇ ಈ ಸ್ಟೋರಿ ನೋಡಿ, ಸಾಧ್ಯವಾದ್ರೆ ಒಂದು ಹನಿ ಕಣ್ಣೀರು ಹಾಕಿ...