Asianet Suvarna News Asianet Suvarna News

ಅಗ್ನಿಶಾಮಕ & ತುರ್ತು ಸೇವಾ ಇಲಾಖೆ ಕೇಂದ್ರ ಕಚೇರಿ ಸೀಲ್‌ಡೌನ್..!

ಈಗಾಗಲೇ ಬೆಂಗಳೂರಿನ ಅಗ್ನಿಶಾಮಕ ದಳದ ಕೇಂದ್ರ ಕಚೇರಿಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಠಾಣೆಗೆ ಸ್ಯಾನಿಟೈಸಿಂಗ್ ಮಾಡಲಾಗಿದೆ. ಫೋನ್‌ ಕರೆಗಳ ಮೂಲಕ ಸೇವೆಗೆ ಲಭ್ಯವಿರಲು ಅಗ್ನಿಶಾಮಕ ದಳಕ್ಕೆ ಸೂಚಿಸಲಾಗಿದೆ..

ಬೆಂಗಳೂರು(ಜೂ.30): ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೂ ಈಗ ಕೊರೋನಾ ಬಿಸಿ ತಟ್ಟಿದ್ದು, ಹಲಸೂರಿನಲ್ಲಿರುವ ಕೇಂದ್ರ ಕಚೇರಿಯನ್ನು ಈಗ ಸೀಲ್‌ಡೌನ್ ಮಾಡಲಾಗಿದೆ. 

ಈಗಾಗಲೇ ಬೆಂಗಳೂರಿನ ಅಗ್ನಿಶಾಮಕ ದಳದ ಕೇಂದ್ರ ಕಚೇರಿಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಠಾಣೆಗೆ ಸ್ಯಾನಿಟೈಸಿಂಗ್ ಮಾಡಲಾಗಿದೆ. ಫೋನ್‌ ಕರೆಗಳ ಮೂಲಕ ಸೇವೆಗೆ ಲಭ್ಯವಿರಲು ಅಗ್ನಿಶಾಮಕ ದಳಕ್ಕೆ ಸೂಚಿಸಲಾಗಿದೆ.

ಅಂತರ್ ಜಿಲ್ಲಾ ಸಂಚಾರಕ್ಕೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ

ಅಗ್ನಿಶಾಮಕ ದಳದ ಸಿಬ್ಬಂದಿಗೆ ತುರ್ತು ಸಂದರ್ಭದಲ್ಲಿ ಫೋನ್‌ ಮೂಲಕ ಲಭ್ಯವಿರಲು ಹೆಚ್ಚುವರಿ ಮಹಾನಿರ್ದೇಶಕರು ಸೂಚನೆಯನ್ನು ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories