#BengaluruFightsCorona: NBF ನಿಂದ ಫ್ರಂಟ್‌ ಲೈನ್ ವರ್ಕರ್ಸ್‌ಗೆ ಮೆಡಿಕಲ್ ಕಿಟ್

- ಬಿಬಿಎಂಪಿ ಸಹಯೋಗದಲ್ಲಿ ಕೈಗೊಂಡ #ಬೆಂಗಳೂರುಫೈಟ್ಸ್‌ಕರೋನಾ ಅಭಿಯಾನಕ್ಕೆ NBF ಸಾಥ್

- ನಗರದಲ್ಲಿಂದು NBF ವತಿಯಿಂದ ಮೆಡಿಕಲ್ ಕಿಟ್ ವಿತರಣೆ 

- ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶಗಳನ್ನು ತಲುಪಿ ಒಂದು ಲಕ್ಷಕ್ಕೂ ಹೆಚ್ಚು ಕಿಟ್‌ಗಳನ್ನು ವಿತರಿಸುವ ಗುರಿ

Suvarna News  | Updated: May 22, 2021, 5:23 PM IST

ಬೆಂಗಳೂರು (ಮೇ. 22): ಕೋವಿಡ್‌ 19 ಎರಡನೇ ಅಲೆ ಯಿಂದ ಬೆಂಗಳೂರಿನ ನಾಗರಿಕರನ್ನು ರಕ್ಷಿಸುವ ಪ್ರಯತ್ನಗಳ ಭಾಗವಾಗಿ ಸಂಸತ್‌ ಸದಸ್ಯ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿ ಶ್ರೀ ರಾಜೀವ್‌ ಚಂದ್ರಶೇಖರ್‌  ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದ್ದಾರೆ.

ಇಂದು NBF ವತಿಯಿಂದ ಫ್ರಂಟ್‌ ಲೈನ್ ವಾರಿಯರ್ಸ್‌ಗೆ ಮೆಡಿಕಲ್ ಕಿಟ್ ವಿತರಿಸಲಾಗಿದೆ. ಜೊತೆಗೆ ಸ್ಲಂ ಏರಿಯಾಗಳಲ್ಲೂ ಮೆಡಿಕಲ್ ಕಿಟ್ ವಿತರಿಸಲಾಗಿದೆ. ಕಿಟ್‌ಗಳಲ್ಲಿ ಪ್ಯಾರಾಸಿಟಮಲ್‌ ಡೋಲೋ 500 ಎಂಜಿ, ಝಿಂಕ್‌ಯುಕ್ತ ವಿಟವಿನ್‌ ಸಿ IXIS ಝಿಂಕೋವಿಟ್‌, ಓಆರ್‌ಎಸ್‌, ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳಿದ್ದವು. ಒಟ್ಟು 10 ಸಾವಿರ ಕಿಟ್ ವಿತರಿಸುವ ಯೋಜನೆ ರೂಪಿಸಲಾಗಿದೆ. ಎನ್‌ಬಿಎಫ್‌ನ ಈ ಕೆಲಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. 
 

Read More...