ಭಾರತಕ್ಕೆ ಬಂದಿರುವುದು ತುಂಬಾ ನೆಮ್ಮದಿ ಎನಿಸುತ್ತಿದೆ, ಉಕ್ರೇನ್‌ನಿಂದ ವಾಪಸ್ಸಾದ ವಿದ್ಯಾರ್ಥಿಗಳ ಸಂತಸ

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಏರ್‌ಲಿಫ್ಟ್ ಆರಂಭಿಸಿದೆ. 219 ಭಾರತೀಯರನ್ನು ಹೊತ್ತ ಮೊದಲ ವಿಮಾನ ಶನಿವಾರ ಮುಂಬೈಗೆ ಬಂದಿಳಿದಿದೆ. ಇಂದು 12 ಮಂದಿ ವಿದ್ಯಾರ್ಥಿಗಳು ಇನ್ನೊಂದು ವಿಮಾನದಲ್ಲಿ ಆಗಮಿಸಿದ್ದಾರೆ. ಬಂದ ವಿದ್ಯಾರ್ಥಿಗಳನ್ನು ಸಚಿವ ಆರ್ ಅಶೋಕ್ ಬರಮಾಡಿಕೊಂಡಿದ್ದಾರೆ. 

First Published Feb 27, 2022, 11:45 AM IST | Last Updated Feb 27, 2022, 12:11 PM IST

ಬೆಂಗಳೂರು (ಫೆ. 27): ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಏರ್‌ಲಿಫ್ಟ್ ಆರಂಭಿಸಿದೆ. 219 ಭಾರತೀಯರನ್ನು ಹೊತ್ತ ಮೊದಲ ವಿಮಾನ ಶನಿವಾರ ಮುಂಬೈಗೆ ಬಂದಿಳಿದಿದೆ. ಇಂದು 12 ಮಂದಿ ವಿದ್ಯಾರ್ಥಿಗಳು ಇನ್ನೊಂದು ವಿಮಾನದಲ್ಲಿ ಆಗಮಿಸಿದ್ದಾರೆ. ಬಂದ ವಿದ್ಯಾರ್ಥಿಗಳನ್ನು ಸಚಿವ ಆರ್ ಅಶೋಕ್ ಬರಮಾಡಿಕೊಂಡಿದ್ದಾರೆ.

'ನಮ್ಮ ಮಕ್ಕಳು ನಮ್ಮ ಮನೆಗೆ ಬಂದಿದ್ದಾರೆ, ನಮಗೆ ಖುಷಿಯಾಗಿದೆ: ಆರ್ ಅಶೋಕ್

'ಭಾರತಕ್ಕೆ ಬಂದಿರುವುದು ತುಂಬಾ ನೆಮ್ಮದಿ ಎನಿಸುತ್ತಿದೆ. ಇಂಡಿಯನ್ ಎಂಬಸಿ, ನಮ್ಮ ರಾಜ್ಯ ಸರ್ಕಾರ ನಮಗೆ ತುಂಬಾ ನೆರವು ನೀಡಿದೆ. ನಮ್ಮ ಪೋಷಕರನ್ನು ನೋಡಿ ಬಹಳ ಖುಷಿಯಾಯ್ತು' ಎಂದು ವಿದ್ಯಾರ್ಥಿನಿಯರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸಂತಸ ಹಂಚಿಕೊಂಡರು. 

Video Top Stories