ಕೇರಳದಿಂದ ಕರ್ನಾಟಕಕ್ಕೆ ಹಕ್ಕಿಜ್ವರ ಹರಡೋ ಆತಂಕ: ಗಡಿಯಲ್ಲಿ ಮುನ್ನೆಚ್ಚರಿಕೆ ಕ್ರಮ
ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಎದುರಾಗಿದ್ದು, ಕರ್ನಾಟಕದ ಗಡಿಯಲ್ಲಿ ಕಟ್ಟೇಚ್ಚರ ವಹಿಸಲಾಗಿದೆ.
ಕೇರಳದಿಂದ ಕರ್ನಾಟಕಕ್ಕೂ ಹಕ್ಕಿಜ್ವರ ಹರಡೋ ಆತಂಕ ಎದುರಾಗಿದ್ದು, ಬಂಡೀಪುರ ಮೂಲೆಹೊಲೆ ಭಾಗದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಚಾಮರಾಜನಗರ ಜಿಲ್ಲಾಡಳಿತ ಹಾಗೂ ಪಶುಪಾಲನೆ ಇಲಾಖೆಯಿಂದ ತೀವ್ರ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ಕೇರಳದಿಂದ ಬರುವ ಎಲ್ಲಾ ವಾಹನಗಳಿಗೆ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಜಿಲ್ಲಾಡಳಿತದಿಂದ ಸರಕು ಹಾಗೂ ಕೋಳಿ ತರುವ ವಾಹನಗಳ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಇನ್ನು ಮೇಲು ಕಾಮನಹಳ್ಳಿಯಲ್ಲಿ ನಾಟಿ ಕೋಳಿ ಸಾವನ್ನಪ್ಪಿದ್ದು, ಲ್ಯಾಬ್‌ಗೆ ಟೆಸ್ಟ್'ಗಾಗಿ ಕೋಳಿಯ ಸ್ಯಾಂಪಲ್‌ಗಳ ರವಾನೆ ಮಾಡಲಾಗಿದೆ ಎಂದು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಶಿವಣ್ಣ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಪ್ರಾಪರ್ಟಿ & ಲೈಫ್ ಸ್ಟೈಲ್ ಎಕ್ಸ್ ಪೋ: ಸಚಿವ ಮುನೇನಕೊಪ್ಪ ಚಾಲನೆ