Asianet Suvarna News Asianet Suvarna News

ರೈತರ ಟ್ರಾಕ್ಟರ್‌ಗಳನ್ನು ಪೊಲೀಸರು ತಡೆಯುತ್ತಿದ್ದಾರೆ, ನಾವಿದಕ್ಕೆ ಬಗ್ಗಲ್ಲ: ಕೋಡಿಹಳ್ಳಿ

'ಟ್ರಾಕ್ಟರ್‌ಗಳಲ್ಲಿ ರ್ಯಾಲಿಗೆ ಬರಲು ರೈತರಿಗೆ ಅವಕಾಶ ಕೊಟ್ಟಿಲ್ಲ. ನಮ್ಮ ರೈತರು ಬೇರೆ ಬೇರೆ ವಾಹನಗಳಲ್ಲಿ ಬರ್ತಾರೆ. ರೈತರನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ' ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. 
 
ಬೆಂಗಳೂರು (ಜ. 26): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು , ವಿವಿಧ ಸಂಘ ಸಂಸ್ಥೆಗಳು ಇಂದು ಬೆಂಗಳೂರಿನಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದಾರೆ. ಹಸಿರು ಕ್ರಾಂತಿಗೆ ಸಾಕ್ಷಿಯಾಗಿದೆ ರಾಜಧಾನಿ. ಪ್ರತಿಭಟನೆಯ ಕಾವು ಈಗಾಗಲೇ ಶುರುವಾಗಿದೆ. 

'ಯಾರೇ ತಡೆದ್ರೂ ಫ್ರೀಡಂ ಪಾರ್ಕ್‌ಗೆ ಬಂದೇ ಬರುತ್ತೇವೆ, ಹೋರಾಟ ನಿಲ್ಲಿಸುವ ಮಾತೇ ಇಲ್ಲ'

'ಟ್ರಾಕ್ಟರ್‌ಗಳಲ್ಲಿ ರ್ಯಾಲಿಗೆ ಬರಲು ರೈತರಿಗೆ ಅವಕಾಶ ಕೊಟ್ಟಿಲ್ಲ. ನಮ್ಮ ರೈತರು ಬೇರೆ ಬೇರೆ ವಾಹನಗಳಲ್ಲಿ ಬರ್ತಾರೆ. ರೈತರನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ' ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. 
 
Video Top Stories