ಪ್ರವಾಸಿ ತಾಣಗಳಲ್ಲಿ ವೀಕೆಂಡ್ ಮೋಜು ಮಸ್ತಿ; ಪ್ರವಾಸಿಗರ ಹುಚ್ಚಾಟ ತರಲಿದೆ ಸಂಕಷ್ಟ

ಲಾಕ್‌ಡೌನ್ ನಿಯಮ ಸಡಿಲಿಕೆ ಆಗಿದ್ದೇ ತಡ ಪ್ರವಾಸಿ ತಾಣಗಳಿಗೆ ಜನ ದೌಡಾಯಿಸುತ್ತಿದ್ದಾರೆ. ವೀಕೆಂಡ್ ಬಂತಂದ್ರೆ ಸಾಕು ನಂದಿಬೆಟ್ಟ, ಚಿಕ್ಕಮಗಳೂರು, ಮುಳ್ಳಯ್ಯನ ಗಿರಿ, ಊಟಿ ಸೇರಿ ಪ್ರವಾಸಿ ತಾಣಗಳಲ್ಲಿ ಜನವೋ ಜನ.

Share this Video
  • FB
  • Linkdin
  • Whatsapp

ಬೆಂಗಳೂರು (ಅ. 12): ಲಾಕ್‌ಡೌನ್ ನಿಯಮ ಸಡಿಲಿಕೆ ಆಗಿದ್ದೇ ತಡ ಪ್ರವಾಸಿ ತಾಣಗಳಿಗೆ ಜನ ದೌಡಾಯಿಸುತ್ತಿದ್ದಾರೆ. ವೀಕೆಂಡ್ ಬಂತಂದ್ರೆ ಸಾಕು ನಂದಿಬೆಟ್ಟ, ಚಿಕ್ಕಮಗಳೂರು, ಮುಳ್ಳಯ್ಯನ ಗಿರಿ, ಊಟಿ ಸೇರಿ ಪ್ರವಾಸಿ ತಾಣಗಳಲ್ಲಿ ಜನವೋ ಜನ.

ಪ್ರವಾಸಿಗರ ಹುಚ್ಚಾಟ: ವಾರಾಂತ್ಯಕ್ಕೆ ಸುರಕ್ಷತೆ ಇಲ್ಲದೆ ಜನಜಾತ್ರೆ!

ಇದರಿಂದ ಪ್ರವಾಸೋದ್ಯಮ ಕ್ಷೇತ್ರ ಆರ್ಥಿಕ ಚೇತರಿಕೆ ಕಾಣುತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಕೋವಿಡ್ ನಿಯಮವನ್ನು ಗಾಳಿಗೆ ತೂರಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಇಲ್ಲ... ಬೇಕಾಬಿಟ್ಟಿ ಮಜಾ ಮಾಡುತ್ತಿದ್ದಾರೆ. ಇದು ಕೋವಿಡ್ ಸೋಂಕು ವ್ಯಾಪಿಸುವ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ. 

Related Video