ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಉಚಿತ ಚಿಕಿತ್ಸೆ: ಡಾ. ಸುಧಾಕರ್
- ಬ್ಲ್ಯಾಕ್, ವೈಟ್ ಫಂಗಸ್‌ನಲ್ಲಿ ಬಣ್ಣದ ಅಂಶ ಬಿಟ್ರೆ ಬೇರೆ ವ್ಯತ್ಯಾಸವಿಲ್ಲ
- ಸಾಂಕ್ರಾಮಿಕ ರೋಗವಲ್ಲ, ಭಯಬೇಡ
- ಸೋಂಕಿತರೆಲ್ಲರಿಗೂ ಉಚಿತ ಚಿಕಿತ್ಸೆ: ಡಾ. ಸುಧಾಕರ್
ಬೆಂಗಳೂರು (ಮೇ. 24): ದೇಶದಲ್ಲಿ 40 ರಿಂದ 50 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೆ ಈಗ ಹಲವು ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿದೆ. ಪ್ರಸ್ತುತ ಮಾಹಿತಿ ಪ್ರಕಾರ ರಾಜ್ಯದಲ್ಲಿ 250 ಬ್ಲ್ಯಾಕ್ ಫಂಗಸ್ ಸೋಂಕಿತರಿದ್ದು ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲೇ ವ್ಯಾಕ್ಸಿನ್ ಇಲ್ಲ, ದುಡ್ಡು ಕೊಟ್ರೆ ಇಲ್ಲಿ ಕೊಡ್ತಾರಂತೆ ಕೋವಿಶೀಲ್ಡ್.!
ರಾಜ್ಯಕ್ಕೆ ಬೇಕಾಗಿರುವ 1400 ವಯಲ್ಸ್ ಅಂಪೋಟೋರೋಸಿಯನ್ ಚುಚ್ಚುಮದ್ದು ಮಂಜೂರಾಗಿದ್ದು, ಹೆಚ್ಚಿನ ಔಷಧ ಕೊಡುವುದಾಗಿ ಕೇಂದ್ರ ಸಚಿವ ಸದಾನಂದ ಗೌಡರೂ ಹೇಳಿದ್ಧಾರೆ ಎಂದು ಹೇಳಿದರು.